ಬಣ್ಣಗಳೇ ಸಾರುತಿವೆ ನೂರಾರು ಕಥೆಯ...
ಕಣ್ಣಿಲ್ಲದವನಿಗೆ ಬೇಕಿರುವಂತೆ ಬೆಳಕು,
ಕಣ್ಣಿರುವವನಿಗೆ ಬೇಕಂತೆ ಬಣ್ಣಗಳು.
ಬಣ್ಣಗಳ ನೆಲೆಗಟ್ಟು ಮನಸಿನಾಲೋಚನೆ
ಮೂಡುತಲಿದೆ ಕುಂಚದಲಿ ನೂರಾರು ತರದಿ
ತದ್ವಿರುದ್ಧ ಭಾವಗಳು ಒಂದಾಗುತಲಿವೆ ಈಗ...
ಮಾಯಗಾರನ ಮಾಯಾವಿ ಕುಂಚದಲಿ,
ತಳುಕು-ಬಳುಕಿನ ನೂರಾರು ಕಥೆಗಳಿವೆಯಿಲ್ಲಿ.
ಕ್ರೌರ್ಯಕ್ಕೂ,ಶಾಂತಿಗೂ ಬಣ್ಣ ಬೆಸೆದಿದೆ ಬಂಧ.
ಬಂಧಿಯಾಗಿವೆ ಎಲ್ಲವೂ ಈ ಚೌಕಟ್ಟಿನೊಳಗೆ
ಜಾತಿ-ಬಣಗಳ ಮೀರಿವೆ ಈ ಬಣ್ಣಗಳು
ಒಂದಾಗಿ ಬೆರೆತಿವೆ ತಮ್ಮತನದೊಂದಿಗೆ
ನಾನು ಮೇಲು, ನೀನು ಕೀಳೆಂಬುದು ಇಲ್ಲಿಲ್ಲ
ಮೇಳೈಸಿವೆ ಎಲ್ಲ ಒಂದೇ ಜೀವದಂತೆ
ಸಾರುತಿವೆ ಎಲ್ಲರಿಗೂ ಸಮಾನತೆಯ ನೀತಿಪಾಠವನು.
ನಮ್ಮಂತೆ ಒಂದಾಗಿ ಬಾಳಿರೆಂದು,
ಬಣ್ಣಗಳೇ ಸಾರುತಿವೆ ನೂರಾರು ಕಥೆಯ...
-vಭಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ