ಶುಕ್ರವಾರ, ಫೆಬ್ರವರಿ 22, 2019

ಕ್ರಾಂತಿಯ ಕಿಚ್ಚು

ಧಗಧಗಿಸುತಲಿದೆ ಎಲ್ಲರೆದೆಯಲಿ
ದ್ರೋಹಿಗಳ ಸದೆಬಡಿಯುವ ಕಿಚ್ಚು

ನರರಾಕ್ಷಸರ ಕ್ರೂರ ಅಟ್ಟಹಾಸದ
ಕೇಕೆ ಕೆರಳಿಸಿತ್ತು ಇಡೀ ದೇಶವನೆ
ಬಾಂಬ್ ದಾಳಿಯ ಅಗ್ನಿಯ ರಾವು
ಕಮರಿಸಿತ್ತು ಮುಗ್ದರ ಆಸೆಗಳನು..

ಬಾರದ ಲೋಕದೆಡೆಗೆ ಪಯಣಿಸಿದರು
ಗಡಿಗಳ ರಕ್ಷಿಸಿದ್ದ ಹಲವಾರು ಯೋಧರು
ಕ್ರಾಂತಿವೀರರ ಮಾರಣ ಹೋಮಕೆ
ಪ್ರತೀಕಾರ ಸಲ್ಲುವುದೇ ತರವಲ್ಲವೇ?

ಯೋಧರ ಆತ್ಮಗಳೂ ಲೀನವಾಗದೆ
ಪಾಪಿಗಳ ಪ್ರಾಣ ಪಡೆಯಲು ಕಾದಿವೆ
ತಮ್ಮ ಬಲಿದಾನದ ನೆತ್ತರಿನೊಂದಿಗೆ
ನೂರಾರು ಮನಗಳಲಿ ಕಿಚ್ಚು ಹೊತ್ತಿಸಿವೆ

ಭಗ್ನ ದೇಹಗಳ ಕಂಡು ಸುಮ್ಮನಾದರೆ
ನಮ್ಮ ಜನ್ಮಕ್ಕೇ, ಮಾನವತೆಗೇ ಅವಮಾನ
ಇನ್ನಾದರೂ ಹಚ್ಚುವ ಕ್ರಾಂತಿಯ ಕಿಚ್ಚು
ಪಾಪಿಗಳ ಹತ್ಯೆಗೆ, ಪ್ರಾಣವನೇ ಪಣವಿಟ್ಟು..

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ