ಬುಧವಾರ, ಫೆಬ್ರವರಿ 6, 2019

ಮನಸ್ಸಿನ ಪ್ರವೇಶದ್ವಾರ

ಕಲ್ಲಿನ ಕೋಟೆಯ ದಾಟಬಹುದಂತೆ
ಮನದ ಗೋಡೆಯ ಹಾರಬಹುದೇ?

ಮರ್ಕಟದಂತಹಾ ಮನಸ್ಸಾದರೂ
ಮನದ ರಕ್ಷಣೆಯಲ್ಲಿ ಬಹು ಹುಶಾರು..!
ಅಪರಿಚಿತರೆಲ್ಲರೂ ಮನದೊಳಗಿರಲಾರರು
ಅದಕ್ಕೊಂದು ಪರಿಮಿತಿ ಇದೆಯಲ್ಲವೇ?

ಪರಿಚಯ ಎಂದಾಕ್ಷಣ ಮಾತ್ರಕ್ಕೆ
ಮನದೊಳಗೆ ನೆಲೆ ನಿಂತುಬಿಡಲು
ಇದೇನು ಅತಿಥಿ ಗೃಹವಲ್ಲವಲ್ಲಾ..!
ನಮ್ಮಯ ರಹಸ್ಯ ಅಭೇದ ಕೋಟೆ

ರಕ್ಷಣೆಗೆ ಮತ್ತೊಬ್ಬರನು ನೆಚ್ಚಲಿಲ್ಲ
ಆಳಿನ ಕೆಲಸವು ಹಾಳು ಅಲ್ಲವೇ..?
ನಿಕಟವರ್ತಿಗಳ ಭಾಂದವ್ಯ ಭವನಕ್ಕೆ
ಇಷ್ಟಾದರೂ ಎಚ್ಚರಿಕೆ ಒಳಿತಲ್ಲವೇ..?

ಮನಸ್ಸು ಕಲ್ಲೆನಿಸುವುದಿಲ್ಲ ಆಪ್ತರಿಗೆ
ಮನಸ್ಸಿನ ಕೋಟೆಗೆ ನಿಷೇಧವುಂಟು
ಅಪರಿಚಿತರಿಗೆ, ಕೆಲ ಪರಿಚಿತರಿಗೂ..!
ನಮ್ಮ ಮನಸ್ಸಿನ ವಾಸಿಗಳ ಹೊಣೆ ನಮ್ಮದೇ..

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ