ಗುರುವಾರ, ಮಾರ್ಚ್ 5, 2020

ಚಿಂತೆ ತರವೇ ಬೆಡಗಿಯೇ?


ಎಳೆಬಿಸಿಲು, ಮರದ ತಂಪು
ಅಡಿಯ ಹುಲ್ಲು, ಹೂವ ಕಂಪು
ಮೂಡಿಸಿದರೂ ಮಧುರ ಭಾವವ..
ನೀ ಹೀಗೇಕಿರುವೆ ಹೇಳೇ ಬೆಡಗಿ?
ನಿನಗೆ ಚಿಂತೆ ಇಷ್ಟು ತರವೇ?
ನಿನ್ನಂತೆ ನೀ ನಡೆಯಲು ಶುರುಮಾಡು
ಎದುರಿನ ವಾದ್ಯವ ಕೈಗೆತ್ತಿಕೊಂಡು
ದುಗುಡ ಮರೆತು ಲೀನವಾಗು ಅದರಲಿ...

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ