ಮೌಖಿಕ ಪರೀಕ್ಷೆಯಲ್ಲಿ ಗೊತ್ತಿಲ್ಲದ ಉತ್ತರಕ್ಕೆ ಗೊತ್ತಿಲ್ಲವೆಂದೇ ನೇರವಾಗಿ ಹೇಳಿದ ವಿದ್ಯಾರ್ಥಿಯನ್ನು ಕಂಡ ಶಿಕ್ಷಕಿಗೆ ಮೊದಲು ಸಿಟ್ಟು ಬಂತಾದರೂ.. "ಪ್ರಯತ್ನವಾದರೂ ಮಾಡಬಾರದೇ..? ಅದನ್ನು ಬಿಟ್ಟು ಏಕಾಏಕಿ ಗೊತ್ತಿಲ್ಲ ಎಂದು ಹೇಳುವುದೇಕೆ..?" ಎಂದು ಪ್ರಶ್ನಿಸಿದರು.
"ಸುಳ್ಳು ಹೇಳಬಾರದು. ಗೊತ್ತಿಲ್ಲದಿದ್ದರೆ ನೇರವಾಗಿ ಹೇಳಬೇಕು. ಮತ್ತೊಬ್ಬರ ಸಮಯ ವ್ಯರ್ಥ ಮಾಡಬಾರದು." ಎಂದು ಮತ್ತೊಬ್ಬರು ಟೀಚರ್ ಹೇಳಿದ್ದ ಮಾತನ್ನೇ ಪುನರುಚ್ಚರಿಸಿದ ಮಗುವನ್ನು ಕಂಡು..
ತಡಬಡಾಯಿಸುತ್ತಾ ತನಗೆ ಗೊತ್ತಿದೆ. ಆದರೆ, ಮರೆತಿದ್ದೇನೆ ಎಂಬ ಭಾವ ಮೂಡಿಸುವ ವಿದ್ಯಾರ್ಥಿಗಳಿಗಿಂತ ಈ ಮಗು ಉತ್ತಮವೆನ್ನಿಸಿ ಉಳಿದವರಿಗಿಂತ ಒಂದು ಅಂಕ ಹೆಚ್ಚೇ ನೀಡಿದರು. ಅದು ಪ್ರಾಮಾಣಿಕತೆಗೆ ದೊರೆತ ಅಂಕವಾಗಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ