ಭಾನುವಾರ, ಜುಲೈ 5, 2026

ನೋವಿನ ದಿನಗಳೇ..? ಅಥವಾ ನಲಿವಿನದ್ದೇ..?!


 ಎಲ್ಲ ದುಃಖಗಳನ್ನೂ ಸಾರ್ವತ್ರಿಕವಾಗಿ ಹಂಚಿಕೊಳ್ಳಲಾಗದು. ಅಂತೆಯೇ.. ಕೆಲ ಸಂತಸಗಳನ್ನೂ..!


ಹಲವಾರು ಬಾರಿ ವಾಸ್ತವಕ್ಕೆ ಬೆನ್ನು ತಿರುವಿ ನಿಲ್ಲುವುದು ಕಷ್ಟಕ್ಕೆ ಹೆದರಿಯೇ ಆಗಿರಬೇಕಿಲ್ಲ.. ಕಷ್ಟ, ನೋವು, ಅಸಹಾಯಕತೆ, ಕಣ್ಣೀರು ಇದ್ಯಾವುದೂ ಮತ್ತೊಬ್ಬರಿಗೆ ಕಾಣಬಾರದು ಅಂತಾ ಅಷ್ಟೇ..! 


ಹಂಚಿಕೊಂಡಷ್ಟು ಅಕ್ಷಯವಾಗುವ ನಲಿವು ಎದುರಿನವರದ್ದೂ ಆಗಲಿ. ನನ್ನ ನೋವುಗಳು ನನ್ನಲ್ಲಿಯೇ ಹಾಗೂ ಹಂಚಿಕೊಂಡ ತೀರಾ ಆಪ್ತರಲ್ಲಿಯೇ ಉಳಿದು ಹೋಗಲಿ. ಸಾಧ್ಯವಾದರೆ ನನ್ನ ಮಾತಿನ ಕುಟುಕು, ಬರಹದಿಂದ ಹೊಮ್ಮುವ ನೋವಿನ ತೀಕ್ಷ್ಣತೆ, ಕಕ್ಕುವ ಕಹಿ ಕಡಿಮೆಯಾಗಲಿ ಎಂದೇ ಪ್ರಾರ್ಥಿಸುವೆ. 


ಹಾಗಾದರೆ, ಈಗ ನಿನ್ನದು ನೋವಿನ ದಿನಗಳೇ..? ಅಥವಾ ನಲಿವಿನದ್ದೇ..?!


ಸದ್ಯಕ್ಕೆ, ನೆಮ್ಮದಿಯನ್ನು ಕಂಡುಕೊಳ್ಳುತ್ತಿರುವುದು ಎನ್ನುತಾಳವಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ