ಸಂಜೆ ಮನೆಯ ಕಾಂಪೌಂಡ್ ನಲ್ಲಿದ್ದ ಮರದ ನೆರಳಲ್ಲಿ ಕುಳಿತವನಿಗೆ ಹಕ್ಕಿಗಳ ಚಿಲಿಪಿಲಿ ಕಲರವ ಕಂಡು ಕತ್ತೆತ್ತಿ ನೋಡಿದ. ಎಷ್ಟೋ ಹಕ್ಕಿಗಳಿಗೆ ಆಸರೆಯಾಗಿದ್ದ ಮರವನ್ನು ಕಂಡು ಕಣ್ಣಲ್ಲಿ ನೀರಾಡಿತು.
ಅಪ್ಪ ನೆಟ್ಟಿದ್ದ ಈ ಮರ ನಿಸ್ವಾರ್ಥದಿಂದ ಎಷ್ಟೋ ಜೀವರಾಶಿಗಳಿಗೆ ಆಸರೆಯಾಗಿದೆ. ಆದರೆ, ಮುಪ್ಪಿನಲ್ಲಿ ಅವರಿಗೆ ಆಸರೆಯಾಗದೆ ತಾನು ಸ್ವಾರ್ಥಿಯಾಗಿ ಆಲೋಚಿಸಿ ಅಪ್ಪನನ್ನು ವೃದ್ದಾಶ್ರಮಕ್ಕೆ ಬಿಟ್ಟದ್ದು ನೆನಪಾಯಿತು. ತಕ್ಷಣವೇ ಅಪ್ಪನಿಗೆ ಕರೆ ಮಾಡಿ ತಾನು ಅವರನ್ನು ಮನೆಗೆ ಕರೆದುಕೊಂಡು ಬರಲು ಬರುತ್ತಿರುವುದಾಗಿ ಹೇಳಿದ.
ಆಸರೆ ಅನಿವಾರ್ಯತೆಗಲ್ಲ, ಸ್ವಾರ್ಥಕ್ಕೂ ಅಲ್ಲ.. ನಿಸ್ವಾರ್ಥ ಪ್ರೀತಿಯಿಂದ ಆಸರೆ ನೀಡಿದರೆ ಅದರ ನೆಳಲಿನ ನೆಮ್ಮದಿಯೇ ಬೇರೆ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ