ಭಾನುವಾರ, ಮೇ 3, 2026

ಲಾಭವಿಲ್ಲದ ಕಾಯಕ (ಬೆಳಕಿಂಡಿಯ ಕತೆಗಳು - 2)


ಎಲ್ಲಾ ಕೆಲಸಗಳನ್ನೂ ಲಾಭವಿಲ್ಲದೆ ಮಾಡುತ್ತಿದ್ದ ಅವನು ಇತ್ತೀಚೆಗೆ ಒಂದು ಕೆಲಸವನ್ನು ಪ್ರತಿಫಲ ಬಯಸದೆಯೂ ಮಾಡುತ್ತಿದ್ದಾನೆ. ಅದೇ, ಒಲವ ಹಂಚುವ, ಮಾನವೀಯತೆಯನ್ನು ಪಸರಿಸುವ ಕಾಯಕ. 


ಒಂದು ತಿಂಗಳ ಹಿಂದಷ್ಟೇ ತೀರಿ ಹೋದ ಅಮ್ಮನ ಕಾಯಕವನ್ನು ಮುಂದುವರಿಸುತ್ತಿದ್ದಾನೆ. ಅಮ್ಮ ಇದ್ದಾಗಲೆಲ್ಲಾ ಲಾಭವಿಲ್ಲದ ಈ ಕಾಯಕವನ್ನು ದೂಷಿಸುತ್ತಿದ್ದವನ ಹಠಾತ್ ಬದಲಾವಣೆಗೆ ಕಾರಣ ಅಮ್ಮನ ಡೈರಿ. ಆ ಡೈರಿ ಹೇಳಿತ್ತು ಅಮ್ಮ ಕೂಡಾ ತೊಟ್ಟಿಯಲ್ಲಿ ಬಿದ್ದಿದ್ದ ತನ್ನನ್ನು ಲಾಭವಿಲ್ಲದಿದ್ದರೂ ತಂದು ಪೋಷಿಸಿದ್ದಳೆಂದು.. 


ಈಗ ಎಲ್ಲರಿಗೂ ಹೇಳುತ್ತಿದ್ದಾನೆ. ಪ್ರೀತಿ, ಮಾನವೀಯತೆಗಳ ಪಸರಿಸುವುದು ಲಾಭವಲ್ಲದ ಕಾಯಕವಾದರೂ ಮನಸ್ಸಿಗೆ ಅನಂತ ಸಂತಸವನ್ನು ತಂದುಕೊಡುತ್ತದೆಂದು.. ಪ್ರೀತಿಯಿಂದ ಬದುಕೋಣ, ಪ್ರೀತಿ ಹಂಚುತ್ತಾ ಬದುಕೋಣ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ