ಪ್ರೀತಿಯ ಉಡುಗೊರೆ ಏನು ಬೇಕೆಂದು ಕೇಳಿದ್ದೇ ತಡ ಅದಕ್ಕೇ ಕಾಯುತ್ತಿದ್ದವಳ ಹಾಗೆ ಪಾರಿಜಾತದ ಗಿಡ ಎಂದೆ..
ಅವನು ಆ ಆಸೆಯನ್ನು ನೆರವೇರಿಸಿದ. ನಾನು ಕೇಳಿದ್ದು ನನಗೆ ದಕ್ಕಿಯೂ ದಕ್ಕದಂತಾಯಿತು..
ಥೇಟ್ ರುಕ್ಮಿಣಿಯ ಬದುಕಿನಂತೆಯೇ ಆಯಿತಲ್ಲ. ದಕ್ಕಿದ್ದು ಗಿಡ ಮಾತ್ರವೇ.. ಹೂವೆಲ್ಲವೂ ಭಾಮೆಯಂತಹಾ ಅವಳ ಪಾಲಿಗೆ..
ಹೀಗೇಕೆಂದು ಕೇಳಿದಾಗ ನೀ ಕೇಳಿದ್ದು ನಿನಗೆ ಸಿಕ್ಕಿತ್ತಲ್ಲ ಎಂದ.. ಬರಿಯ ಪರಿಮಳ ಆಘ್ರಾಣಿಸಿ ಸುಮ್ಮನಿರಲಾಗಲಿಲ್ಲ. ನಮ್ಮ ಪ್ರೀತಿಯೂ ಪಾರಿಜಾತದಷ್ಟೇ ಅಲ್ಪಾಯುಷಿ ಎಂದೆನಿಸಿಬಿಟ್ಟಿತ್ತು.
ಪಾರಿಜಾತದ ಗಿಡವನ್ನು ಪೋಷಿಸುವ ಮನಸ್ಸಾಗಲಿಲ್ಲ.. ಪಾರಿಜಾತದ ಗಿಡ ಒಣಗಿ ಹೋಯಿತು. ಅಂತೆಯೇ, ನಮ್ಮ ನಡುವಿನ ಪ್ರೀತಿಯೂ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ