ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ನನ್ನ ಕಡೆಯಿಂದ ಇದೊಂದು ಪುಟ್ಟ ಕಾಣಿಕೆ. ನೋಡಿಲ್ಲಿ.. ಎನ್ನುತ್ತಾ ಅವನು ಕೊಟ್ಟ ಕಾಣಿಕೆಯನ್ನು ನೋಡಿದೆ.
ಅರೆ..! ಲವ್ ಬರ್ಡ್ಸ್
ಆದರೆ, ಅವುಗಳು ಪಂಜರದ ಬಂಧಿಗಳು
ಕಾಣಿಕೆಯ ರೂಪದಲ್ಲಿ ಕೊಟ್ಟ ಅವುಗಳನ್ನು ಕಂಡ ಆ ಕ್ಷಣಕ್ಕೆ ಮನಸ್ಸು ಮುದಗೊಂಡಿತ್ತು. ಅವುಗಳಿಗೂ ಏನಾದರೂ ಕೊಡಬೇಕೆನಿಸಿತು. ಪಂಜರದ ಬಾಗಿಲು ತೆಗೆದಿಟ್ಟೆ.
ಸ್ವತಂತ್ರದ ಕಾಣಿಕೆಯನ್ನು ಮನಸಾರೆ ಅನುಭವಿಸುತ್ತಿದ್ದವು ಅವು.. ನನ್ನ ನನಸಾಗದ ಕನಸನ್ನು..
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ