ಭಾನುವಾರ, ಮೇ 3, 2026

ಸಂತೃಪ್ತಿ (ಬೆಳಕಿಂಡಿಯ ಕತೆಗಳು - 3)


"ಪುಟ್ಟಿ ಈ ತಿಂಡಿಯನ್ನು ಮರದ ಕೆಳಗೆ ಕೂತಿರೋ ವಯಸ್ಸಾದ ಅಜ್ಜಿಗೆ ಕೊಟ್ಟು ಬಾ.." ಎಂದ ಅನುವಿಗೆ ಮಗಳು ಜಿತು 

"ಅಮ್ಮ, ಅವರು ನಿನಗೆ ಗೊತ್ತಾ..??" ಎಂದು ಕೇಳಿದಳು. 

"ಇಲ್ಲ ಪುಟ್ಟಿ" ಎಂದಾಗ " ಗೊತ್ತಿಲ್ಲದೇ ಇರುವವರಿಗೆ ತಿಂಡಿ ಕೊಟ್ಟರೆ ನಮಗೇನು ಲಾಭ " ಎಂದ ಜಿತುವಿಗೆ


"ಎಲ್ಲಾ ಕೆಲಸವನ್ನು ಲಾಭ ಇಟ್ಟುಕೊಂಡೇ ಮಾಡಲು ಆಗುವುದಿಲ್ಲಮ್ಮ. ಗಿಡದಲ್ಲಿ ಹೂ ಅರಳುವುದರಿಂದ ಅದಕ್ಕೇನೂ ಲಾಭವಿಲ್ಲ. ದಿನಾ ಬೀಸೋ ಗಾಳಿ, ಉದಯಿಸುವ ಸೂರ್ಯ, ಹರಿಯುವ ನೀರು ಇದ್ಯಾವುದೂ ತಮ್ಮ ತಮ್ಮ ಲಾಭಕ್ಕೋಸ್ಕರ ತಾವು ತಮ್ಮ ಕೆಲಸ ಮಾಡುವುದಿಲ್ಲ. ಅವುಗಳಿಂದ ನಮಗೆ ಉಪಯೋಗ ಅಷ್ಟೇ..

ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ.. ನಮ್ಮ ಕೆಲಸವನ್ನು ನಾವು ಮಾಡಬೇಕು. ಯಾವುದೇ ಲಾಭ-ನಷ್ಟದ ಆಲೋಚನೆ ಮಾಡಬಾರದು" ಎಂದಾಗ ಜಿತು ಅರ್ಥವಾದಂತೆ ಹೋಗಿ ಅಜ್ಜಿಗೆ ತಿಂಡಿ ಕೊಟ್ಟಾಗ.."ನೂರು ಕಾಲ ಸುಖವಾಗಿರಮ್ಮ" ಎಂದು ಆಶೀರ್ವಾದ ಮಾಡಿದ ಅಜ್ಜಿಯನ್ನು ಕಂಡು ಜಿತುವಿನ ಮನದಲ್ಲಿ ಸಂತೃಪ್ತಿಯ ಭಾವ.


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ