ಭಾನುವಾರ, ಮೇ 3, 2026

ಬದುಕಿನ ಪರೀಕ್ಷೆ (ಬೆಳಕಿಂಡಿಯ ಕತೆಗಳು - 8)


"ಅಂಕ" ನಮ್ಮ ಬದುಕಲ್ಲಿ ಮುಖ್ಯವೇ ಅಮ್ಮ ಎಂದು ಕೇಳಿದ ಮಗುವಿಗೆ

ಅಂಕವೇ ಬದುಕು. ಅದಕ್ಕಾಗಿಯೇ ನೀನು ಕಷ್ಟಪಡಬೇಕು ಎಂದ ಅಮ್ಮನ ಮಗ ಅಂಕಗಳು ಕಡಿಮೆಯಾದವೆನ್ನುವ ಸಣ್ಣ ನಿರಾಶೆಗೆ ಖಿನ್ನತೆಯ ಮೆಟ್ಟಿಲೇರುತ್ತಿದ್ದ.


ಅಂಕ ಬದುಕಲ್ಲಿ ಮುಖ್ಯ ಹೌದು. ಆದರೆ, ಅಂಕವೇ ಬದುಕಲ್ಲ ಎಂದಾಗ ಅಮ್ಮ ನೀಡಿದ ಧೈರ್ಯದಿಂದ ಮಗ ಸಾಧನೆಯ ಹಾದಿಯ ಮೆಟ್ಟಿಲೇರುತ್ತಿದ್ದಾನೆ.


ಅಂಕವೇ ಬದುಕಾಗಬಾರದು.. ಬದುಕಲ್ಲಿ ಮುನ್ನಡೆಯಲು ಅಂಕ ಪಡೆಯುವತ್ತ ಹೆಜ್ಜೆ ಹಾಕಿದಲ್ಲಿ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣತೆ ಕಟ್ಟಿಟ್ಟ ಬುತ್ತಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ