ಭಾನುವಾರ, ಜುಲೈ 12, 2026

ಮಿತಿ ಮೀರಿದಾಗ.. (ಬೆಳಕಿಂಡಿಯ ಕತೆಗಳು - 51)


"ಅಮ್ಮ, ಕತೆಗಳಲ್ಲಿ ರಾಕ್ಷಸರ ಅಟ್ಟಹಾಸ ಮಿತಿ ಮೀರಿದ ನಂತರವೇ ದೇವರು ಬರೋದ್ಯಾಕೆ..? ಮೊದಲೇ ಬಂದು ಬುದ್ದಿ ಹೇಳಬಹುದಲ್ಲಾ..?!" ಎಂಬ ಪುಟ್ಟಿಯ ಆಲೋಚನೆ ಹಾಗೂ ಪ್ರಶ್ನೆಗಳೆರಡೂ ಒಟ್ಟಿಗೆ ಒಡಮೂಡಿದವು.

"ಯಾರೇ ಆಗಲಿ ತಪ್ಪು ಮಾಡುತ್ತಿದ್ದಾರೆ ಎನ್ನುವಾಗಲೇ ತಿದ್ದಿಕೊಳ್ಳುವ ಸೂಚನೆ ಸಿಗುತ್ತದೆ ಕಂದಾ. ಯಾವುದಕ್ಕೂ ಬಗ್ಗದೆ ಅವರ ವರ್ತನೆ ಮೇರೆ ಮೀರಿದಾಗಲಷ್ಟೇ ದೇವರು ಅವತಾರ ತಾಳುವುದು. 

ಈಗಿನ ದಿನಗಳನ್ನೇ ನೋಡು.. ಭೂಕುಸಿತ, ಜಲಪ್ರಳಯ, ಭೂಕಂಪ ಇನ್ನೂ ಮುಂತಾದವನ್ನು. ಮನುಷ್ಯರು ಪ್ರಕೃತಿಯನ್ನು ಹಾಳು ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದಾಗಲೆಲ್ಲಾ ಎಚ್ಚರಿಸಿದ ಪ್ರಕೃತಿ ಇನ್ನು ತಡೆಯಲಾರೆನು ಎಂದಾಗಲೇ ನಾಶಕ್ಕೆ ನಿಂತಿದ್ದು ಅಲ್ಲವಾ..?!" ಎಂದಾಗ ಪುಟ್ಟಿಯ ಆಲೋಚನೆಗೆ ಮತ್ತಷ್ಟು ರೆಕ್ಕೆಗಳು ಮೂಡಿದವು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ