ಭಾನುವಾರ, ಜುಲೈ 12, 2026

ಮೋಹಕ ಯಶಸ್ಸು (ಬೆಳಕಿಂಡಿಯ ಕತೆಗಳು - 50)


"ಪ್ರತಿ ಬಾರಿಯೂ ಹೊಸದೇನೋ ಶುರು ಮಾಡಲು ಹೊರಟು ಸೋಲುತ್ತೀಯ, ಅರ್ಧಕ್ಕೆ ಕೈ ಬಿಡುತ್ತೀಯ.. ಇನ್ನೂ ಎಷ್ಟು ದಿನ ಹೀಗೆ ಪ್ರಯತ್ನಗಳನ್ನೇ ಮಾಡುತ್ತಾ ಬಂದ ಕೆಲಸದ ಆಫರ್ ಗಳನ್ನೆಲ್ಲ ಮೂಲೆಗೆಸೆಯುವುದು..?!" ಕೇಳಿದ ಅಮ್ಮನ ಪ್ರಶ್ನೆಗೆ "ಇನ್ನೊಂದು ಕೊನೆ ಪ್ರಯತ್ನ ಅಷ್ಟೇ..!" ಎಂದುತ್ತರಿಸಿದ್ದಳು.

ಇಂದು ಅವಳದ್ದೇ ಕಸ್ಟಮೈಸ್ಡ್ ಕೇಕ್, ಚಾಕೊಲೇಟ್ ಗಳನ್ನು ಹೊಸತನದೊಂದಿಗೆ ಗ್ರಾಹಕರ ಎದುರಿಗಿಡುತ್ತಾಳೆ. 


ಅಂದು ಕೊನೆಯ ಪ್ರಯತ್ನ ಎಂದುಕೊಂಡವಳು ಸೋತಾಗಲೆಲ್ಲಾ ಅರ್ಧಕ್ಕೆ ಕೈ ಬಿಟ್ಟಂತೆ ಈ ಪ್ರಯತ್ನವನ್ನು ಕೈಬಿಡಲಿಲ್ಲ. ಹೊಸ ಹೊಸ ಚಾಕೊಲೇಟ್ ಪ್ರಯತ್ನಿಸುವ ಚಾಕೊಲೇಟ್ ಮೋಹ ಅವಳಿಗೆ ಗುರುವಾಗಿತ್ತು. ತನಗಿಷ್ಟವಾಗದ ಚಾಕೊಲೇಟ್ ಅನ್ನು ಸಹ ಅರ್ಧಕ್ಕೆ ಬಿಡದವಳು ಜೊತೆಗೆ ಇದರ ರುಚಿ ಹೀಗಿದ್ದಿದ್ದರೆ..? ಇದರ ಕಲರ್, ಡಿಸೈನ್ ಎಂದುಕೊಳ್ಳುತ್ತಿದ್ದವಳು ತನ್ನದೇ ಆರ್ಡರ್ ಗಳನ್ನು ಪೂರೈಸಿಕೊಳ್ಳಲು ಹೊರಟು ಹೋಂ ಮೇಡ್ ಕೇಕ್, ಚಾಕೊಲೇಟ್ ಗಳ ತಯಾರಿಸಿ ಆನ್ಲೈನ್ ಪ್ರಚಾರದಿಂದ ಈಗ ಚಾಕೊಲೇಟ್ ನಷ್ಟೇ ಸವಿಯಾದ ಯಶಸ್ಸು ಕಂಡಿದ್ದಾಳೆ. ಈಗ ಕುನಾಫ ತಯಾರಿಕೆಯಲ್ಲಿಯೂ ಹೆಸರುವಾಸಿಯಾಗುತ್ತಿದ್ದಾಳೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ