ಪರಿಚಯವಿದ್ದರೂ ಮುಗುಳ್ನಗೆ ಬೀರಿ ಸುಮ್ಮನಾಗುತ್ತಿದ್ದ ಅಮ್ಮ ಮಗಳ ಖುಷಿಗಾಗಿ ಈಗ ಅಪರಿಚಿತರನ್ನೂ ಪರಿಚಯವೆಂಬಂತೆ ಮಾತನಾಡಿಸುತ್ತಾಳೆ.. ಮುಗುಳ್ನಗುತ್ತಾಳೆ, ಸ್ನೇಹಿತರಾಗಿಸಿಕೊಳ್ಳಲು ಮುಂದಾಗುತ್ತಾಳೆ.
ಮಗಳಿಗೆ ಹೊಸ ಜಗತ್ತನ್ನು ಪರಿಚಯಿಸಲು ತನ್ನ ಜಗತ್ತನ್ನು ಹಿಗ್ಗಿಸಿಕೊಳ್ಳುತ್ತಿದ್ದಾಳೆ. ಅಂತರ್ಮುಖಿ ಅಮ್ಮನೀಗ ಎಕ್ಸ್ಟ್ರೋವರ್ಟ್ ಆಗುತ್ತಿದ್ದಾಳೆ. ಮಗಳಂತೆಯೇ... ಮಗಳಿಗೋಸ್ಕರ ಮಾತ್ರವೇ..!
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ