ಭಾನುವಾರ, ಜುಲೈ 12, 2026

ಬರ್ಡ್ ಹೌಸ್ (ಬೆಳಕಿಂಡಿಯ ಕತೆಗಳು - 49)


 ಸಂಜೆ ಬಂದಾಗ ತನ್ನ ಗೂಡಿನ ಬದಲಾಗಿ ಮತ್ತಾವುದೋ ಗೂಡನ್ನು ಕಂಡು ಗಲಿಬಿಲಿಯಾಗಿ ಅದರ ಸುತ್ತಲೇ ಸುತ್ತುತ್ತಿರುವ ಹಕ್ಕಿಯನ್ನು ಕಂಡ ಪುಟ್ಟ ಮಗು "ನೋಡಿ ಅಪ್ಪ, ಆ ಹಕ್ಕಿಗೆ ನಾವು ತಂದಿಟ್ಟ ಬ್ಯೂಟಿಫುಲ್ ಬರ್ಡ್ ಹೌಸ್ ಇಷ್ಟವಾಗಿದೆ. ಕಾರ್ಟೂನ್ ನಲ್ಲಿಯೂ ಹೀಗೆಯೇ ಖುಷಿಯಾದಾಗ ಹಕ್ಕಿ ಗೂಡಿನ ಸುತ್ತ ಹಾರುತ್ತದೆ. ಗೊತ್ತಾ..?"  ಎಂದು ಹೇಳುತ್ತಿತ್ತು.

ಅನಿವಾರ್ಯವಾಗಿ ತನ್ನ ನೆಲೆಯನ್ನು ಬದಲಾಯಿಸಿಕೊಂಡಿದ್ದ ಅಜ್ಜನಿಗೆ ಮಾತ್ರ ಹಕ್ಕಿಯ ವೇದನೆ ವೇದ್ಯವಾಗುತ್ತಿತ್ತು.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ