ಭಾನುವಾರ, ಜುಲೈ 12, 2026

ಪ್ರೇರೇಪಣೆ (ಬೆಳಕಿಂಡಿಯ ಕತೆಗಳು - 52)


 "ಏನೋ ದೊಡ್ಡ ಸಾಹಸ ಮಾಡಿದಂತೆ ಬೀಗಬೇಡ. ಸ್ಟೇಜ್ ಮೇಲೆ ಹೋಗಿ ಮಾತನಾಡಲು ನೀನು ಅವಳಿಗೆ ಧೈರ್ಯ ನೀಡಿದ್ದಷ್ಟೇ.. ನೋಡೋಣ ಇದೆಷ್ಟು ವರ್ಕ್ ಆಗುತ್ತೆ ಅಂತಾ" ಎಂದವನಿಗೆ ಅಚ್ಚರಿಯಾಗುವಂತೆ ಕಿಕ್ಕಿರಿದ ಸಭಾಂಗಣದಲ್ಲಿ ಮಗಳು ನಿರರ್ಗಳವಾಗಿ ಆಶುಭಾಷಣ ಸ್ಪರ್ಧೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.

"ಆತ್ಮವಿಶ್ವಾಸ ತುಂಬುವುದು ಅವಶ್ಯಕ ಕಣ್ರೀ. ಸಾಹಸ ಮಾಡಿದ್ದು ನಾನಲ್ಲ.. ನಮ್ಮ ಮಗಳು. 

ಪ್ರತಿಯೊಬ್ಬರಲ್ಲೂ.. ಅದರಲ್ಲೂ ಮಕ್ಕಳಲ್ಲಿ ಆಂಜನೇಯನಂತೆಯೇ ಬಲ ಇರುತ್ತದೆ. ಅವರನ್ನು ಪ್ರೇರೇಪಿಸೋ ಜಾಂಬವಂತ ನಾವಾಗಬೇಕು ಅಷ್ಟೇ.." ಎಂದವಳ ಧ್ವನಿಯಲ್ಲಿ ಹೆಮ್ಮೆ ತುಳುಕಾಡುತ್ತಿತ್ತು.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ