ಭಾನುವಾರ, ಜುಲೈ 12, 2026

ನಿಚ್ಚಳವೀ ಪಥ

 


ಪಥ ಕಂಡುಕೊಳ್ಳುವ ಭರದಿ

ಅನುಸರಣೆ ಬೇಕಿಲ್ಲ..

ಗಮ್ಯದೆಡೆ ಸಾಗುವ ಸಂಭ್ರಮಕೆ

ಸ್ವಯಂ ತೆರೆದುಕೊಳ್ಳುವುದು ಜಾಡು


ನದಿ ಹರಿವ ಪಥ ಬದಲಿಸಿದರೂ 

ತಡೆಯೆಲ್ಲವ ಸುತ್ತುವರಿದು.. 

ಇಲ್ಲವೇ ಕೊಚ್ಚಿ ಮುನ್ನುಗಿ

ತನ್ನ ಗಮ್ಯವನಂತೂ ಬದಲಿಸದು


ನಿರಂತರತೆಯ ಪಯಣದಿ

ಸಮಸ್ಯೆಯ ಎದುರಿಸಿ ನಿಂತು

ತನ್ನ ನವೀಕರಿಸಿಕೊಳ್ಳುವಾಗ

ಪಥದೊಡನೆ ನಾವೂ ನಿಚ್ಚಳವೇ..!


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ