ಶನಿವಾರ, ಅಕ್ಟೋಬರ್ 24, 2026

ಲೀಡರ್ (ಬೆಳಕಿಂಡಿಯ ಕತೆಗಳು - 94)

 


"ಗುಣ, ನೀನೇ ಈ ಕ್ಲಾಸ್ ಲೀಡರ್" ಎನ್ನುತ್ತಾ ಅವತ್ತಿನ ತರಗತಿಯಲ್ಲಿ ಅವಳನ್ನು ಲೀಡರ್ ಮಾಡಿ ಹೊರಟಿದ್ದೆ ನಾನು. ಮೆಕ್ಯಾನಿಕಲ್ ಬ್ರ್ಯಾಂಚ್ ನ 60 ಜನರ ತರಗತಿಯಲ್ಲಿ ಏಕೈಕ ಹುಡುಗಿ ಅವಳು. ಹುಡುಗರು "ಹುಡುಗಿಯ ಕೈ ಕೆಳಗೆ ಲೀಡರ್ ಶಿಪ್" ಎನ್ನಲಿಲ್ಲ. ಬದಲಾಗಿ ಅವಳಿಗೆ ಸಹಕಾರ ನೀಡಿ ಮನೆಮಗಳಂತೆ ಕಂಡು ಸ್ಫೂರ್ತಿ ತುಂಬಿದ್ದರು. ಅವಳೂ ಅಷ್ಟೇ ಕೀಳಿರಿಮೆ ತೊರೆದು ಎಲ್ಲರ ಒಳಿತಿಗಾಗಿ ಪಣ ತೊಟ್ಟಿದ್ದಳು. 

ಲೀಡರ್ ಶಿಪ್ ಎನ್ನುವುದು ಲಿಂಗ ಅಥವಾ ಹುಡುಗ-ಹುಡುಗಿ ಎಂಬ ಭೇಧದಿಂದ ಕೂಡಿರುವುದಿಲ್ಲ. ಅದಕ್ಕೆ 'ನಾಯಕತ್ವ' ಎನ್ನಲಿಲ್ಲ ನಾನು.. 'ನಾಯಕಿ'ಯೂ ಆಗಬಲ್ಲಳು ಅವಳು. ಅದಕ್ಕೆ ಲೀಡರ್ ಎಂದದ್ದು ನಾನು..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ