ಶನಿವಾರ, ಅಕ್ಟೋಬರ್ 24, 2026

ಪ್ರಪಂಚಕ್ಕೆ ರಹದಾರಿ (ಬೆಳಕಿಂಡಿಯ ಕತೆಗಳು -95)

 


"ಅಮ್ಮ ನಾನು ದೊಡ್ಡವನಾದ ಮೇಲೆ ಇಡೀ ಪ್ರಪಂಚ ಸುತ್ತುತ್ತೇನೆ" ಎಂದಾಗ ಖುಷಿಯಾಯಿತು. ಆದರೆ, ಚಿಕ್ಕ ಮಗ "ನಾನು ದೊಡ್ಡವನಾದ ಮೇಲೆ ನಿಮ್ಮ ಜೊತೆಯೇ ಇರುತ್ತೇನೆ. ನೀವೇ ನನ್ನ ಪ್ರಪಂಚ" ಎಂದಾಗ ಮನಸ್ಸು ತುಂಬಿ ಬಂದಿತು. "ಯಾಕೆ ಹೀಗೆ ಹೇಳುತ್ತಿದ್ದೀರಿ..??" ಎಂದಿದ್ದಕ್ಕೆ "ನಾನು ವಾಸ್ಕೊಡಿಗಾಮಾ ಕಥೆ ಕೇಳಿದೆ" ಎಂದ ದೊಡ್ಡವನು. "ನಾನು ಬಾಲ ಗಣೇಶನ ಕತೆ ನೋಡಿದೆ. ಸುಬ್ರಹ್ಮಣ್ಯ ನವಿಲು ತೆಗೆದುಕೊಂಡು ಲೋಕ ಸುತ್ತುವುದಕ್ಕೆ ಹೊರಟರೆ ಗಣೇಶ ಅಪ್ಪ-ಅಮ್ಮನನ್ನೇ ಸುತ್ತಿ ಬುದ್ಧಿವಂತನಾದ" ಎಂದ ಚಿಕ್ಕವನು. 

ಒಬ್ಬ ಸಾಹಸದತ್ತ ಹೊರಟರೆ ಮತ್ತೊಬ್ಬ ಸಂಸ್ಕೃತಿ ಮೌಲ್ಯಗಳತ್ತ ಹೊರಟ. 

ಇಬ್ಬರ ಭವಿಷ್ಯವೂ ಹಸನಾಗಿ ಅವರ ಪ್ರಪಂಚ ಸುಂದರವಾಗಿರಲಿ ಎಂದಷ್ಟೇ ಹರಸಬಲ್ಲೆ. ದಾರಿ ತೋರಿಸುವುದಷ್ಟೇ ನಮ್ಮ ಕೆಲಸ.. ಅವರ ಪ್ರಪಂಚವನ್ನು ಆಯ್ದುಕೊಳ್ಳುವ ಆಯ್ಕೆ ಅವರಿಗೇ ಬಿಟ್ಟದ್ದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ