ಭಾನುವಾರ, ಅಕ್ಟೋಬರ್ 4, 2026

ಬೇವು-ಬೆಲ್ಲ (ಬೆಳಕಿಂಡಿಯ ಕತೆಗಳು - 87)


 "ಅಜ್ಜಿ, ಬೆಲ್ಲ ಮಾತ್ರ ಸಾಕು. ಬೇವು ಬೇಡ" ಎಂದವನನ್ನು ಕಂಡು ಅಜ್ಜಿ "ಮಗು, ಜೀವನದಲ್ಲಿ ಕಷ್ಟ ಬೇಡ ಸುಖ ಸಾಕು ಅಂದರೆ ಆಗುತ್ತೇನಪ್ಪಾ.. ನಮ್ಮನ್ನು ನೋಡು ಕಷ್ಟ-ಸುಖ ಎಲ್ಲದಕ್ಕೂ ಹೊಂದಿಕೊಂಡು ಬಾಳುತ್ತಾ ಇಲ್ವಾ.. " ಎಂದಾಗ ತಾತ " ಕಹಿ ಇದ್ದರೇನೇ ಕಂದಾ ಸಿಹಿಯ ಸವಿ ಅರಿವಾಗುವುದು. ನಮ್ಮನ್ನು ನೋಡು ಕಹಿ ಉಂಡು ಈಗ ಸಿಹಿ ತಿನ್ನೋ ಕಾಲದಲ್ಲೂ ಶುಗರ್ " ಎಂದದ್ದಕ್ಕೆ ಪುಟ್ಟ "ನಾನು ನಿಮ್ಮ ಹಾಗೆ ತೀರಾ ಕಹಿನೂ ತಿನ್ನಲ್ಲ, ತೀರಾ ಸಿಹಿ ಕೂಡಾ ಬೇಡುವುದಿಲ್ಲ. ಎರಡನ್ನೂ ಸಮಾನವಾಗಿ ಬಯಸುತ್ತೇನೆ" ಎನ್ನುತ್ತಾ ಬೇವು ಬೆಲ್ಲ ತಯಾರಿಸುವಲ್ಲಿ ಕೈ ಹಾಕಿದ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ