ಜೊತೆಯಲ್ಲಿ ಸಾಗೋಣ
ಜೊತೆಯಾಗಿ ಮಾಗೋಣ
ನಿರಂತರ ಕಲಿಕೆಯಲ್ಲಿ
ಕೈ ಹಿಡಿದು ನಡೆಯುತ
ಸವಾಲುಗಳ ಎದುರಿಸುತ
ಜವಾಬ್ದಾರಿಗಳ ಹೊರುತ್ತಾ
ಜೊತೆಯಲ್ಲಿ ಸಾಗೋಣ
ಜೊತೆಯಾಗಿ ಮಾಗೋಣ
ಜೊತೆಯಲ್ಲೇ ಸಾಗಿದರೂ
ಕೈ ಹಿಡಿದು ನೀ ನಡೆಸು
ಸ್ಫೂರ್ತಿ ತುಂಬಿ ನೀ ಹರಸು
ನೀ ಅಮ್ಮ.. ನಾ ಮಗುವು
ಜೊತೆಯಲ್ಲಿ ಸಾಗೋಣ
ಜೊತೆಯಾಗಿ ಮಾಗೋಣ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ