ಶನಿವಾರ, ಅಕ್ಟೋಬರ್ 31, 2026

ಆಂತರಿಕ ಒತ್ತಡ (ಬೆಳಕಿಂಡಿಯ ಕತೆಗಳು - 97)

 


"ಹೊರಗಿನ ಒತ್ತಡದಿಂದ ಆತಂಕ, ಭಯ ಮಾತ್ರವಲ್ಲ ಜೀವವೂ ಹೋಗಬಹುದು. ಅವನಿಗೆ ಅಂಕ ಗಳಿಸಲೇ ಬೇಕೆಂಬ ಒತ್ತಾಯ ಬೇಡ. " ಎಂದ ಶಿಕ್ಷಕರ ಮಾತಿಗೆ "ಮತ್ತೆ.. ಅವನ ವಿದ್ಯಾಭ್ಯಾಸ.." ಎಂದೆ..


"ಅವನಿಗೆ ಕಲಿಯಬೇಕೆನ್ನುವ, ಸಾಧಿಸಬೇಕೆನ್ನುವ ಒತ್ತಡ ಒಳಗಿನಿಂದ ಹುಟ್ಟಬೇಕು. ಆಗಷ್ಟೇ ಪ್ರಗತಿ ಸಾಧ್ಯ. ಮೊಟ್ಟೆ ಒಡೆದು ಮರಿ ಹೊರ ಬರಬೇಕಾದರೆ, ರೇಷ್ಮೆ ಗೂಡಿನಿಂದ ಹುಳು ಆರೋಗ್ಯಯುತವಾಗಿ ಹೊರ ಬರಬೇಕಾದರೆ ಒಳಗಿನ ಒತ್ತಡ ಕಾರಣ. ಇದು ಹಾಗೆಯೇ.. " ಎಂದರು. ಅವರ ವಿಶ್ಲೇಷಣೆ ಕೇಳಿ ಮನಸ್ಸು ನೆಮ್ಮದಿಯಿಂದ ತುಂಬಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ