"ಬಣ್ಣಗಳ ಸವಿಯೇ ಅದ್ಭುತ" ಎಂದು ಹಾಕಿದ್ದ ಗೆಳತಿಯೊಬ್ಬಳ ಸ್ಟೇಟಸ್ ಕಂಡು ಹೌದು, ಬಣ್ಣಗಳ ನೋಟ ಅತ್ಯದ್ಭುತ ಎಂದೆ.
"ಅಷ್ಟೇ ಅಲ್ಲ, ರುಚಿ ಕೂಡಾ.." ಎಂದಳು. ಅಚ್ಚರಿಯ ನೋಟ ಬೀರಿದಾಗ "ಬಣ್ಣ-ಬಣ್ಣದ ಐಸ್ಕ್ರೀಂಗಳ ರುಚಿ ರುಚಿಯ ಹಣ್ಣಿನ ಪ್ಲೇವರ್ ಗಳಿಗೆ ಸರಿಸಾಟಿ ಯಾವುದು..??" ಎಂದಳು.
ಗೆಳತಿ ಕವಯಿತ್ರಿಯಾದಳೆಂದು ಸಂಭ್ರಮ ಪಡುವಾಗ ಅದಕ್ಕೂ ಅವಳ ರುಚಿ ತಳುಕು ಹಾಕಿದ್ದು ಕಂಡು ನಗು ಬಂತಾದರೂ ಆಸೆಯೂ ಬಂದಿತು. ನಾನೂ ಬಣ್ಣಗಳನ್ನು ಆಸ್ವಾದಿಸಬೇಕು.
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ