ಭಾನುವಾರ, ಜುಲೈ 19, 2026

ಆಯ್ಕೆ (ಬೆಳಕಿಂಡಿಯ ಕತೆಗಳು - 57)

 


ಮಗುವಿನ ಲಾಲನೆ ಪಾಲನೆ ಅಥವಾ ಕೆಲಸ ಎಂಬ ಎರಡು ಆಯ್ಕೆಗಳಿದ್ದವು ಕಣ್ಣ ಮುಂದೆ. ಬದುಕಿನ ದಾರಿ ಕವಲೊಡೆಯುತ್ತಿದ್ದ ಕ್ಷಣ ಅದು. ಎರಡೂ ಮುಖ್ಯವೇ.. ಈ ಭರಾಟೆಯ ಬೆಂಗಳೂರಿನ ಬದುಕಿನಲ್ಲಿ ಕೆಲಸದವರನ್ನು ನಂಬಿ ಮಗುವನ್ನು ಬಿಟ್ಟು ಹೋಗುವಂತಿರಲಿಲ್ಲ. ಮಗುವಿನ ಭವಿಷ್ಯವನ್ನು ರೂಪಿಸಲು, ಅದಕ್ಕೆ ಬೇಕಾಗಿರುವ ಸವಲತ್ತುಗಳನ್ನು ಕೊಡಲು ಇಬ್ಬರ ಸಂಬಳವೂ ಅಗತ್ಯವಿತ್ತು.


ಆದರೆ, ಈ ಆಯ್ಕೆಯ ತಲೆ ಬಿಸಿ ಇರುವಾಗಲೇ ಕೋವಿಡ್ ಬಂದದ್ದು.. ಪುಣ್ಯಕ್ಕೆ ವರ್ಕ್ ಫ್ರಮ್ ಹೋಮ್ ದೊರೆತು ಮಗು ಹಾಗೂ ಕೆಲಸ ಎರಡನ್ನೂ ನಿಭಾಯಿಸುವ ಹಾಗಾಯಿತು. 

ಬದುಕಲ್ಲಿ ಕೆಲವೊಮ್ಮೆ ಕವಲೊಡೆದ ದಾರಿಯೂ ಮತ್ತೆ ಒಂದಾಗುವ ಆಯ್ಕೆ ಸಿಗುತ್ತದೆ. ಅದೃಷ್ಟವಿದ್ದರೆ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ