ಮಕ್ಕಳಿಗೆ ಶಿಕ್ಷಣವನ್ನು ಬರೀ ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೇಳಿ ಬಿಡುತ್ತಾರಾ..?? ತಪ್ಪು ಮಾಡಿದಾಗ ತಿದ್ದಬೇಕಾದರೆ ಕೆಲವೊಮ್ಮೆ ಶಿಕ್ಷಕಿಯಾಗಿ ನಾನು ಶಿಕ್ಷೆ ನೀಡಬೇಕಾಗುತ್ತದೆ. ನಾನು ಕೂಡಾ ಆ ಮಗುವಿನ ರಕ್ಷಕಿಯೇ ತಾನೇ..? ಒಂದು ಮಗುವನ್ನೇ ಸಂಭಾಳಿಸಲು ಅಮ್ಮ ಕಷ್ಟ ಪಡುವಾಗ ಇಲ್ಲಿ ನಾನು ಒಂದು ತರಗತಿಯಲ್ಲಿ ಕಡಿಮೆ ಎಂದರೂ 30 ಮಕ್ಕಳನ್ನು ಸಂಭಾಳಿಸಬೇಕು. ಹಾಗಿದ್ದಲ್ಲಿ, ಅವರನ್ನು ಒಳ್ಳೆ ಮಾತಿನಿಂದಲೇ ತಿದ್ದಬೇಕೆನ್ನುವ ಕಾನೂನು ಎಷ್ಟು ಪಾಲನೆಯಾಗಲು ಸಾಧ್ಯ..??
ಮಗು ಹೋಮ್ ವರ್ಕ್ ಮಾಡಿರಲಿಲ್ಲ ಎಂಬ ಕಾರಣಕ್ಕೆ ಕ್ಲಾಸ್ ನಿಂದ ಹೊರಗೆ ನಿಲ್ಲುವ ಶಿಕ್ಷೆ ನೀಡಿದ್ದೆ. ಆದರೆ, ಆತ ಹತ್ತು ನಿಮಿಷಕ್ಕೆಲ್ಲಾ ಬಿದ್ದು ಬಿಟ್ಟಿದ್ದನಂತೆ. ತಿಂಡಿ ತಿಂದು ಬಂದಿರಲಿಲ್ಲವಂತೆ.
ಇದಕ್ಕೆಲ್ಲಾ ನಾನೇ ಕಾರಣ ಎಂಬಂತೆ ದೂಷಿಸುತ್ತಾರೆ. ಮಗುವನ್ನು ಸರಿ ದಾರಿಯಲ್ಲಿ ನಡೆಸುವ ಸಲುವಾಗಿ ನೀಡಿದ ಶಿಕ್ಷೆ ಈಗ ನನಗೇ ಶಿಕ್ಷೆಯಾಗಿದೆ. ಸಹೋದ್ಯೋಗಿಗಳು ಮಾತ್ರವಲ್ಲ.. ನನ್ನ ವಿದ್ಯಾರ್ಥಿಗಳು ಸಹಾ ನೋಡುವ ದೃಷ್ಟಿ ಬೇರೆಯಾಗಿದೆ. ನಾನು ಮಾಡಿದ್ದು ತಪ್ಪಾ..??
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ