"ಕರೋನಾ ಮಹಾಮಾರಿ ವಕ್ಕರಿಸಿರುವುದರಿಂದ ಎಲ್ಲರಿಗೂ ತೊಂದರೆಯೇ.. ಹಾಗೆಂದು ಮನೆಯಲ್ಲಿಯೇ ಸುಮ್ಮನೆ ಕುಳಿತುಕೊಳ್ಳಲಾಗುತ್ತದೆಯೇ..?? ಹಾಗೆ ಕುಳಿತರೆ ಬದುಕು ನಿಲ್ಲಬಲ್ಲದೇ..?? ಸಮಯ ಓಡುತ್ತಲೇ ಇದೆ. ನಾವು ನಿಂತ ಮಾತ್ರಕ್ಕೆ ಬದುಕು ಸಮಯ ನಿಲ್ಲುತ್ತದೆಯೇ..??
ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಿಕೊಳ್ಳಬೇಕು, ಸ್ಯಾನಿಟೈಜರ್ ಹಾಕಿಕೊಳ್ಳಬೇಕು. ಮನೆಯಲ್ಲಿ ಕರೆದ ಹಾಲು ಮಾರುತ್ತಾ, ಮನೆಯಂಗಳದಲ್ಲಿಯೇ ಬೆಳೆದಿದ್ದ ಹೂಗಳನ್ನು ಕಟ್ಟುತ್ತಾ, ಅಲ್ಲೇ ಬೆಳೆದ ಸೊಪ್ಪು-ತರಕಾರಿಗಳನ್ನು ಮಾರುತ್ತಾ ಬದುಕು ಸಾಗಿಸಬೇಕು." ಎಂದರು ಅಜ್ಜಿ.
"ಅಜ್ಜಿ ನೀವು ಈ ವಯಸಲ್ಲಿ, ಅದೂ ಕರೋನಾ ಕಾಲದಲ್ಲಿ ಹೀಗೆ ಬಂದಿದ್ದೀರಾ.. ಮನೆಯಲ್ಲಿಯೇ ಕುಳಿತುಕೊಳ್ಳುವುದಲ್ಲವೇ" ಎಂದು ಪ್ರಶ್ನಿಸಿದ್ದಕ್ಕೆ...
ಅವರು ಹೇಳಿದ್ದರಲ್ಲಿ ತಪ್ಪೇನಿದೆ.. "ನಾವು ಸುಮ್ಮನೆ ಕುಳಿತ ಮಾತ್ರಕ್ಕೆ ಸಮಯ, ಬದುಕು ನಿಲ್ಲುವುದಿಲ್ಲ.. ಅಲ್ಲವೇ..??"
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ