ಪುಟ್ಟ ಮಕ್ಕಳನ್ನು ಮೊದಲ ದಿನದ ಶಾಲೆಗೆ ಸ್ವಾಗತಿಸಿ, ಸಂತೈಸಿ, ಸಂಭಾಳಿಸಿ ಅರ್ಧ ದಿನ ಅವರೊಡನೆ ಕಳೆದು, ಆಯಾಸದಿಂದ ಬಂದು ಸ್ಟಾಫ್ ರೂಂನಲ್ಲಿ ಕುಳಿತರೆ.. ಮೊದಲ ಮಳೆಯ ಮಣ್ಣ ಕಂಪು ಆವರಿಸಿ ಮನಕ್ಕೆ ಚೈತನ್ಯ ತುಂಬಿತು.
ಚಿಗುರಿಗೆ ಜೀವಜಲವಾದ ಮಳೆಗೂ.. ಪುಟ್ಟ ಮಕ್ಕಳಿಗೆ ಜೀವನೋತ್ಸಾಹಕ್ಕೆ ದಾರಿದೀಪವಾಗುತ್ತಿರುವ ತನ್ನ ಕಾಯಕಕ್ಕೂ ಸಾಮ್ಯತೆ ಕಂಡು ಹೆಮ್ಮೆಯೆನಿಸಿತು. ಮತ್ತರ್ಧ ದಿನದ ಕೆಲಸಕ್ಕೆ ಹುರುಪು ತಂದುಕೊಂಡು ಖುಷಿಯಿಂದ ಕ್ಲಾಸ್ ರೂಂ ಕಡೆಗೆ ಹೆಜ್ಜೆ ಹಾಕಿದಳು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ