ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಾ ಬ್ಯುಸಿಯಾಗಿ ತಿರುಗುತ್ತಿದ್ದ ಅವಳಿಗೆ ಕಾಲಿನ ಫ್ಯಾಕ್ಚರ್ ಎಲ್ಲವನ್ನೂ ಬಿಟ್ಟು ೩ ತಿಂಗಳು ಮನೆಯಲ್ಲಿಯೇ ಕೂರುವ ಸಂಧರ್ಭ ಒದಗಿಸಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದವಳು ಮನೆಗಷ್ಟೇ ಸೀಮಿತವಾದಾಗ ಖಿನ್ನತೆಗೆ ಜಾರುವಂತಾಗಿತ್ತು. ಆದರೆ, ಅಮ್ಮ ಕೈಗಿತ್ತ ಪ್ರವಾಸ ಕಥನ ಅವಳ ಪುಸ್ತಕ ಪಯಣವನ್ನು ಶುರು ಮಾಡಿಸುತ್ತಷ್ಟೇ ಅಲ್ಲದೆ ಓದಿನ ಪಯಣಕ್ಕೆ ಮುನ್ನುಡಿಯಾಯಿತು. ಮುಂದೆ ಟ್ರಾವೆಲಿಂಗ್ ನಲ್ಲಿಯೂ ಮೊಬೈಲ್ ಬದಲಿಗೆ ಪುಸ್ತಕ ಹಿಡಿಯುವ ವಿಭಿನ್ನ ಆಲೋಚನೆಯಲ್ಲಿದ್ದಾಳೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ