"ಅಮ್ಮ, ಸೂರ್ಯೋದಯ ನೋಡಲು ದಿನಾ ಇಷ್ಟು ಬೇಗ ಎಬ್ಬಿಸೋದ್ಯಾಕೆ..?" ಎಂಬ ಪುಟ್ಟಿಯ ಪ್ರಶ್ನೆಗೆ
"ಸೂರ್ಯೋದಯ ಬರೀ ಬೆಳಗಲ್ಲ ಪಾಪು.. ಇಡೀ ದಿನದ ನಮ್ಮ ಉತ್ಸಾಹ" ಎಂದ ಅಮ್ಮನಿಗೆ
"ಹಾಗಾದರೆ, ಸೂರ್ಯಾಸ್ತವೆಂದರೆ ಉತ್ಸಾಹ ಮುಗಿದಂತಾ..?" ಎಂದು ಕೇಳಿದಳು ಪುಟ್ಟಿ.
"ಇಲ್ಲ ಪಾಪು, ನಾವು ಮತ್ತಷ್ಟು ಕನಸು ಕಂಡು ಉತ್ಸಾಹ ಹೆಚ್ಚಿಸಿಕೊಳ್ಳುವ ಬ್ರೇಕ್ ಅದು." ಎಂದಾಗ ಪುಟ್ಟಿಗೆ ಸೂರ್ಯೋದಯದ ಜೊತೆಗೆ ಸೂರ್ಯಾಸ್ತವನ್ನೂ ಸವಿಯುವ ಉತ್ಸಾಹ ಅಂದು ಹೆಚ್ಚೇ ಆಗಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ