ಭಾನುವಾರ, ಜೂನ್ 14, 2026

ಸಮಾಧಾನದ ಪರಿಹಾರ (ಬೆಳಕಿಂಡಿಯ ಕತೆಗಳು - 33)


ಮಗಳ ಮಾರ್ಕ್ಸ್ ಕಾರ್ಡ್ ನೋಡಿ, ಕಡಿಮೆ ಅಂಕ ತೆಗೆದಿದ್ದಕ್ಕೆ ಇಬ್ಬರಿಗೂ ಅಸಮಾಧಾನವಾದರೂ ಮಗಳನ್ನು ಬೈಯ್ಯಲಿಲ್ಲ. ಎಂದೂ ಅಷ್ಟು ಕಡಿಮೆ ಅಂಕ ತೆಗೆಯದವಳ ಸಮಸ್ಯೆಯ ಮೂಲ ಹುಡುಕಲು ಅವಳನ್ನು ಪ್ರಶ್ನಿಸಿದರು. ಕಾಲೇಜಿನ ಪಾಠ, ಅರ್ಥೈಸಿಕೊಳ್ಳುವಿಕೆ ಯಾವುದರಲ್ಲಿಯೂ ಸಮಸ್ಯೆ ಇರಲಿಲ್ಲ. ಆದರೆ, ಪರೀಕ್ಷೆಯ ಸಮಯದಲ್ಲಿ ಮಾತ್ರ ಕಾಡುವ ತಲೆನೋವು ಅವಳ ಏಕಾಗ್ರತೆಯನ್ನು ಕುಂದಿಸಿತ್ತು.


ಮನೋವೈದ್ಯರ ಬಳಿ ಸಮಾಲೋಚನೆ ನಡೆಸಿ ಮಗಳ ಪರೀಕ್ಷಾ ಭಯಕ್ಕೆ ಪರಿಹಾರ ದೊರಕಿಸಿದ ನಂತರ ಅವಳ ಅಂಕಗಳು ಗಮನೀಯವಾಗಿ ವೃದ್ಧಿಸಿದ್ದವು.

ಕಡಿಮೆ ಅಂಕ ಬಂದರೂ ಬೈಯ್ಯದೆ, ಅಂಕ ಗಳಿಕೆಯೇ ಮುಖ್ಯ ಎನ್ನದೆ, ಕ್ಷಣಿಕ ಅಸಮಾಧಾನವಾದರೂ ತಾಳ್ಮೆಯಿಂದ ಸಮಸ್ಯೆಗೆ ಸಮಾಧಾನವಾಗಿ ಪರಿಹಾರ ಕಂಡುಕೊಟ್ಟ ಪೋಷಕರೆಂದರೆ ಅವಳಿಗೆ ಹೆಮ್ಮೆ.

~ವಿಭಾ ವಿಶ್ವನಾಥ್ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ