ಶನಿವಾರ, ಜೂನ್ 13, 2026

ಸುದ್ದಿ ಕಾಲ

 


ಸುದ್ದಿ ಮಾಡುವ ಹಪಾಹಪಿಗೆ

ಸುಳ್ಳು ಸುದ್ದಿಯ ಸತ್ಯದಂತೆ ಬಿಂಬಿಸಿ

ನೈಜತೆಯ ಮರೆಮಾಚಿ ನಡೆವಾಗ

ಗಾಳಿಸುದ್ದಿ ಹರಡುತ್ತಿತ್ತು

ಚಾರಿತ್ರ್ಯ ಹರಣವಾಗುತ್ತಿತ್ತು

ಸುಳ್ಳು ಮೆರವಣಿಗೆ ಬರುತಿತ್ತು

ಅರ್ಧ ಸತ್ಯವಷ್ಟೇ ತೆರೆದಿತ್ತು

ನಾಳೆಗೆ ನೇಪಥ್ಯಕ್ಕೆ ಸರಿದಿತ್ತು


ಸುದ್ದಿ ಮಾಗುವ ಕಾಲದಲ್ಲಿ

ಸುದ್ದಿ ಮಾಡಿದವರೇ ಮರೆಯಾದರು

ಶುದ್ಧಿಯಾಗಬೇಕಿದೆ ಅಂತರಂಗ

ಸತ್ಯ ಮುನ್ನೆಲೆಗೆ ಬರಬೇಕಿದೆ

ಸುಳ್ಳು ಬೆತ್ತಲಾಗಬೇಕಿದೆ

ಗಾಳಿಸುದ್ದಿ ನಿಲ್ಲಬೇಕಿದೆ

ಬ್ರೇಕಿಂಗ್ ಗೆ ಬ್ರೇಕ್ ಹಾಕಬೇಕಿದೆ

ನವ ಯುಗ ಬರಬೇಕಿದೆ


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ