ಅವಳ ಬಳಿ ಬಂದು, ಮನಸ್ತಾಪ ಮಾಡಿಕೊಂಡಿದ್ದ ವ್ಯಕ್ತಿಯ ಬಗ್ಗೆ ಸಮಯಸಾಧಕರು ಹಗೆ ತುಂಬಲು ಯತ್ನಿಸಿದಾಗ ಅವಳು ಕಿವಿಗೊಡಲಿಲ್ಲ. ಮಾತ್ರವಲ್ಲ.. ಇನ್ನೊಬ್ಬರ ಕುರಿತು ಅವರ ಅನುಪಸ್ಥಿತಿಯಲ್ಲಿ ಚರ್ಚಿಸಲೂ ಇಚ್ಚಿಸಲಿಲ್ಲ. ಅವಳೂ ಹಿತ್ತಾಳೆ ಕಿವಿಯವಳಾಗಿ, ಸಂಚಿಗೆ ಬಲಿಯಾಗುವ ಬಲಿಪಶುವಾಗಲಿಲ್ಲ. ಅವಳದ್ದು ಎಂದಿಗೂ ನೇರಾನೇರ ಮಾತು.
ಅವಳು ಗಂಧದ ಜೊತೆ ಗುದ್ದಾಡುವವಳೇ ಹೊರತು, ಸಗಣಿಯ ಜೊತೆ ಸರಸವಾಡುವವಳಲ್ಲ ಎಂಬುದನ್ನು ಮನದಟ್ಟು ಮಾಡಿಸಿದ್ದಳು. ಇಲ್ಲಿ ಸಮಯಸಾಧಕರು ಮುಖಭಂಗ ಅನುಭವಿಸಿದ್ದರು.. ಅಲ್ಲಿ ಬಾಕಿ ಉಳಿದಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ