ಭಾನುವಾರ, ಜೂನ್ 28, 2026

ಸದ್ಯಕ್ಕೆ ಹಗುರಾಗೋಣ

 


ಜಂಜಾಟಗಳನೆಲ್ಲ ಕ್ಷಣಕಾಲ ಮರೆಯೋಣ

ನಮ್ಮಿಷ್ಟದ ಹಾಡ ಗುನುಗುತಲಿ..

ಹಿತವಾದ ಸಂಗೀತ ಕೇಳುತಲಿ..

ಯಾವುದೋ ಹೊಸ ಖಾದ್ಯದ ತಯಾರಿಯಲಿ..

ಒಂದಿಷ್ಟು ದೂರ ಸುಮ್ಮನೆ ಸಾಗುತಲಿ..

ಹಿತೈಷಿಯೊಡನೆ ತುಸು ಹರಟಿ ಹಗುರಾಗುತಲಿ..

ಮನದ ಮಾತುಗಳ ಡೈರಿಯಲಿ ಬರೆಯುತಲಿ..

ಸವಿ ನೆನಪೊಂದ ಮೆಲುಕು ಹಾಕುತಲಿ..

ಮಗುವಿನೊಡನೆ ಮಗುವಾಗಿ ಬೆರೆಯುತಲಿ..

ಸುಮ್ಮನಿರದೆ ಏನೋ ಒಂದು ಮಾಡುತಲಿ..!

ಕೊನೆಗೊಮ್ಮೆ

ಎಲ್ಲವನು ಕೊಡವಿ ಎದ್ದು ನಡೆಯುವುದು

ಇದ್ದೇ ಇರುವುದಲ್ಲ..!

ಸದ್ಯಕ್ಕೆ ಹಗುರಾಗೋಣ


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ