ಭಾನುವಾರ, ಜೂನ್ 7, 2026

ಮುಗಿಲೆತ್ತರ... (ಬೆಳಕಿಂಡಿಯ ಕತೆಗಳು - 28)


 "ಮುಗಿಲಿಗೆ ಏಣಿ ಹಾಕುವ ಬದಲು ನೆಲದ ಮೇಲೆ ನಡೆಯುವುದನ್ನು ಕಲಿ" ಎಂದ ಅವರಿವರ ಮಾತಿಗೆ ಬದಲು ನುಡಿಯಲಿಲ್ಲ ಅವಳು.

"ಮುಗಿಲೆತ್ತರದ ಕನಸು ಕಂಡರೆ ಕೈಗೆಟುಕುವ ಕನಸುಗಳನ್ನು ಸಾಧಿಸುವುದು ಕಷ್ಟವಾಗದು" ಎಂಬ ಅಪ್ಪನ ಮಾತು ಸದಾ ಅವಳ ಕಿವಿಯಲ್ಲಿ ಗುನುಗುಣಿಸುತ್ತಿರುತ್ತದೆ. ಈಗ ಅವಳ ಚಿಕ್ಕ-ಪುಟ್ಟ ಸಾಧನೆಗಳು ಅವಳಿಗೆ ಅಹಂ ತರುವುದಿಲ್ಲ. ಕನಸು ಮುಗಿಲೆತ್ತರಕ್ಕೂ.. ಅಹಂ ಪಾತಾಳದಲ್ಲೂ ಇರಬೇಕೆಂದು ತನ್ನ ಮಗಳಿಗೆ ಹೇಳಿಕೊಡುತ್ತಿದ್ದಾಳೆ.

~ವಿಭಾ ವಿಶ್ವನಾಥ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ