ಪ್ರತಿ ಬಾರಿಯೂ ಮ್ಯಾನೇಜರ್ ನ ಮಾತಿಗೆ, ನಿರ್ಧಾರಕ್ಕೆ ಸಹಮತ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದವನಿಗೆ ಪ್ರಮೋಷನ್ ಸಿಗುತ್ತದೆ ಎಂದುಕೊಂಡಿದ್ದವರೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದಂತೆ ಮ್ಯಾನೇಜರ್ ನ ಹೆಚ್ಚಿನ ನಿರ್ಧಾರಗಳಿಗೆ ನಕಾರ ಸೂಚಿಸಿ, ವಾದ ಮಾಡಿ ಅವರ ವಿರುದ್ಧವೆಂಬಂತೆ ಕಾಣುತ್ತಿದ್ದವನಿಗೆ ಸಿಕ್ಕ ಪ್ರಮೋಷನ್ ಅಚ್ಚರಿ ತರಿಸಿತ್ತು.
ಅದನ್ನು ಕಂಡು ಹೇಳಿದ್ದಿಷ್ಟು.. "ಪ್ರತಿ ನಿರ್ಧಾರಕ್ಕೂ ಸಹಮತ ಸೂಚಿಸಿದವರಿಗಿಂತ, ಅದನ್ನು ಒರೆ ಹಚ್ಚಿ ನೋಡಿ ಮತ್ತೊಮ್ಮೆ ಆಲೋಚಿಸುವಂತೆ ಮಾಡಿದವರಿಂದ ಹೆಚ್ಚು ಕಲಿತಿದ್ದೇನೆ. ಹಾಗಾಗಿ ಅವರ ಕೌಶಲ್ಯಕ್ಕೆ ಈ ಪ್ರಮೋಷನ್." ಎಂದಾಗ ತಾವು ಎಲ್ಲಿ ಎಷ್ಟು ಮಾತನಾಡುವುದು ಅವಶ್ಯಕವೆಂದು ಅರಿತ ಹಲವರು ಒಪ್ಪಿಗೆಯಾದುದಕ್ಕೆ ಮಾತ್ರವೇ ಸಹಮತ ಸೂಚಿಸುವುದನ್ನು, ಉಳಿದುದನ್ನು ತಮ್ಮ ರೀತಿಯಲ್ಲಿ ಪ್ರಸ್ತುತಪಡಿಸುವುದನ್ನೂ ರೂಢಿಸಿಕೊಳ್ಳುತ್ತಿದ್ದಾರೆ.
~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ