ಪರಿಸರ ರಕ್ಷಣೆಯ ಜಾಗೃತಿಗಾಗಿ ಜಿಲ್ಲೆಯಾದ್ಯಂತ ಜಾಥಾ ಹೊರಟಿದ್ದೇನೆ ಎಂದು ಘೋಷಿಸುತ್ತಿದ್ದ ನಾಯಕರ ಹಿಂಬಾಲಕರು ಧ್ವನಿವರ್ಧಕದ ಮೂಲಕ ಶಬ್ಧ ಮಾಲಿನ್ಯವನ್ನು, ಕರಪತ್ರಗಳನ್ನು ಹಂಚಲು ಹೋಗಿ ಕಸವನ್ನು, ಪ್ರಚಾರಕ್ಕಾಗಿ ಹೆಚ್ಚಿನ ವಾಹನಗಳನ್ನು ಬಳಸಿ ವಾಯು ಮಾಲಿನ್ಯವನ್ನು, ನಾಯಕನ ಜೊತೆ ಹೊರಟವರಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಲು ಹೋಗಿ ಪ್ಲಾಸ್ಟಿಕ್ ಕಸವನ್ನು ಹೆಚ್ಚು ಮಾಡುತ್ತಲೇ ಸಾಗುತ್ತಿದ್ದರು. ತಮ್ಮ ಪ್ರಚಾರದ ಭರಾಟೆಯಲ್ಲಿ ಸೆಲ್ಪಿ, ವಿಡಿಯೋಗೆ, ಭಾಷಣಕ್ಕೆ ಸೀಮಿತವಾದ ಜಾಥಾ ಕುರಿತು, ಅವರು ಮೂಡಿಸಿದ ಜಾಗೃತಿ ಕುರಿತು ಎಲ್ಲೆಡೆಯೂ ಚರ್ಚೆಯಾಗುತ್ತಿತ್ತು.
ಇದಾವುದೂ ಅರಿವಿಲ್ಲದ ಹಳ್ಳಿಯ ರೈತನೊಬ್ಬ ರಸ್ತೆ ಬದಿಯಲ್ಲಿ ಗಿಡ ನೆಟ್ಟು, ನೀರುಣಿಸಿ, ಕಾಲ್ನಡಿಗೆ, ಸೈಕಲ್ ಸವಾರಿಯ ಮೂಲಕ ಪರಿಸರವನ್ನು ರಕ್ಷಿಸುವ ಮೌನ ಕಾಯಕ ಮಾಡುತ್ತಿದ್ದ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ