ಭಾನುವಾರ, ಜೂನ್ 28, 2026

ಗೆಲುವು ನನ್ನದಲ್ಲ (ಬೆಳಕಿಂಡಿಯ ಕತೆಗಳು - 43)


ಗುರಿ ಮಾತ್ರವೇ ಅವಳ ಕಣ್ಣಲ್ಲಿದ್ದದ್ದು. ಒಲಂಪಿಕ್ ನಲ್ಲಿ ಗೆದ್ದು ಪದಕ ಪಡೆದವಳ ಕಣ್ಣು, ಮನಸ್ಸುಗಳೆರಡೂ ತುಂಬಿ ಬಂದಿದ್ದವು. ಈ ಗೆಲುವು ಪಡೆದುಕೊಳ್ಳಲು ತಾನೆಷ್ಟು ಕಳೆದುಕೊಂಡಿದ್ದೆ ಎಂಬುದು ಗೆಲುವಿನ ಮುಂದೆ ಗೌಣವಾಗಿತ್ತು. ಅದು ಕೇವಲ  ಒಬ್ಬಳ ಗೆಲುವಾಗಿರಲಿಲ್ಲ. ಅದು ಕುಟುಂಬ, ಸ್ನೇಹಿತರು, ತರಬೇತುದಾರರ ಗೆಲುವಾಗಿತ್ತು. ಅದು ಅಷ್ಟಕ್ಕೆ ಸೀಮಿತವಾಗಲಿಲ್ಲ ಊರು, ಜಿಲ್ಲೆ, ರಾಜ್ಯದ ಗೆಲುವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ದೇಶದ ಗೆಲುವಾಗಿತ್ತು. ಗೆಲುವಿನ ಸಂಭ್ರಮ ಎಲ್ಲರದ್ದೂ ಆದಾಗ ಗೆಲುವು ಮತ್ತಷ್ಟು ಆಪ್ತವಾಗಿತ್ತು. ಮುಂದಿನ ಗುರಿ ಅವಳ ಕಣ್ಣಲ್ಲಿ ನಿಚ್ಚಳವಾಗಿತ್ತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ