ಭಾನುವಾರ, ಜೂನ್ 21, 2026

ಬದಲಾಯಿತೇ ನಿಯತ್ತು (ಬೆಳಕಿಂಡಿಯ ಕತೆಗಳು - 41)


ಪ್ರತಿದಿನವೂ ಬೀದಿ ನಾಯಿಯೊಂದಕ್ಕೆ ತಪ್ಪದೇ ಅನ್ನ ಹಾಕುತ್ತಿದ್ದಳು ಅವಳು. ಹಾಗೆಂದು, ನಾಯಿಯೊಂದನ್ನು ತಂದು ಸಾಕಿ ಸಲಹುವ ಆಸೆಯಿದ್ದರೂ ಅದು ಅವಳಿಗೆ ಸಾಧ್ಯವಿರಲಿಲ್ಲ. ದೂರದೂರಿನಿಂದ ಕೆಲಸಕ್ಕಾಗಿಯೇ ಬಂದು ಇಲ್ಲಿ ಉಳಿದಿದ್ದಳು. ಆ ದೊಡ್ಡ ಜವಾಬ್ದಾರಿಯ ಜೊತೆಗೆ ಇದನ್ನೂ ಅಂಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದೇ ಪ್ರೀತಿಯಿಂದ ನಾಯಿಗೆ ಊಟ ಹಾಕುತ್ತಿದ್ದಳು. ರಾತ್ರಿ ಪಾಳಿಯ ಕೆಲಸ ಮುಗಿಸಿ ಬರುವಾಗ ಪಕ್ಕದ ಮನೆಯ ಪರಿಚಿತನೇ ಆಗಿದ್ದ ಅಂಕಲ್ ಅವಳ ಮೇಲೆರಗಲು ಕಾದಿದ್ದ. ಎಲ್ಲಿಂದಲೋ ಬಂದ ನಾಯಿ ಅವಳನ್ನು ಅಪಾಯದಿಂದ ಪಾರು ಮಾಡಿತ್ತು. 

ಮನುಷ್ಯನ ನಿಯತ್ತು ಯಾವತ್ತಾದರೂ ಬದಲಾಗಬಹುದು. ಆದರೆ, ಪ್ರಾಣಿಯದ್ದಲ್ಲ ಎಂಬುದು ಅವಳಿಗೆ ಮನದಟ್ಟಾಗಿತ್ತು. ಅದಾದ ನಂತರ ಆ ನಾಯಿಯ ಜೊತೆಗೆ ಮತ್ತೊಂದಿಷ್ಟು ಮೂಕ ಪ್ರಾಣಿಗಳಿಗೆ ಅನ್ನ ಹಾಕಲು ಶುರುವಿಟ್ಟಳು ಅವಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ