ಭಾನುವಾರ, ಜೂನ್ 28, 2026

ಸಹಾಯ ಹಸ್ತ (ಬೆಳಕಿಂಡಿಯ ಕತೆಗಳು - 45)


 ಉಪಕಾರ ಸ್ಮರಣೆ ಮಾಡದೆ, ಅಗೌರವದಿಂದ ಬೆನ್ನ ಹಿಂದೆ ಆಡಿದ ಮಾತುಗಳು ಅವಳಿಗೆ ಬೇಸರ ತರಿಸಿದ್ದು ಮಾತ್ರವಲ್ಲದೆ ಅಪಾತ್ರ ದಾನ ಮಾಡಿದೆ ಎಂಬ ಭಾವವನ್ನೂ ಹುಟ್ಟಿಸಿತ್ತು. ಇನ್ನು ಮತ್ತಾರಿಗೂ ಉಪಕಾರವನ್ನೇ ಮಾಡಬಾರದು ಎಂದುಕೊಳ್ಳುವಷ್ಟರಲ್ಲಿ ಮತ್ತಾರೋ ಸಹಾಯ ಬಯಸಿ ಬಂದಾಗ ಇಲ್ಲವೆನ್ನಲಾರಳು. ಅಪನಂಬಿಕೆ, ಮೋಸ, ದ್ರೋಹದಾಚೆಗೂ ಇವರು ಅವರಂತಲ್ಲವೆಂಬ ನಂಬಿಕೆ ಮೂಡಿಸಿಕೊಳ್ಳುತ್ತಾಳೆ. ನಿಜವಾದ ಸಹಾಯ ಬೇಕಾದವರಿಗೆ ತನ್ನಿಂದ ತೊಂದರೆಯಾಗಬಾರದೆಂಬ ಕಾಳಜಿಯ ಮೃದು ಮನಸ್ಸು ಕರಗುತ್ತಲೇ ಇರುತ್ತದೆ.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ