ಶನಿವಾರ, ಜೂನ್ 13, 2026

ಸ್ಥಾಯಿ (ಬೆಳಕಿಂಡಿಯ ಕತೆಗಳು - 32)

ಸಾಗರದ ದಡದಲ್ಲಿ ನಿಂತು ತನ್ನ ಪುಟ್ಟ ಬೆರಳುಗಳಿಂದ ತನ್ನ ಹೆಸರು ಬರೆಯುತ್ತಿದ್ದ ಅವಳ ಹೆಸರು ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಸಫಲಳಾಗದೆ ಅಳಲು ಶುರುವಿಟ್ಟಳು ಎನ್ನುವಾಗ ಅಪ್ಪ ಅಪ್ಪಿ ಸಮಾಧಾನಿಸಿದ್ದರು. ತೀರಾ ಚಿಕ್ಕವಳಲ್ಲವಾದರೂ ತನ್ನ ಛಲ ಕೈಗೂಡದ ದುಃಖ ಅವಳಿಗೆ. 

"ಮರಳ ಮೇಲಿನ ಹೆಸರು ಶಾಶ್ವತವಲ್ಲ. ಸಾಗರ ಎಲ್ಲವನ್ನೂ ತನ್ನೊಡಲಿಗೆ ಸೇರಿಸಿಕೊಳ್ಳುವಂತೆ ನೀನು ಒಳ್ಳೆಯ ಗುಣಗಳನ್ನು ನಿನ್ನೊಳಗೆ ಸೇರಿಸಿಕೊಂಡು ಯಾರೂ ಅಳಿಸಲಾಗದಂತೆ ನಿನ್ನೆಸರನ್ನು ಸ್ಥಾಪಿಸಿಕೊಂಡು ಸ್ಥಾಯಿಯಾಗು" ಎಂಬ ಬುದ್ಧಿವಾದ ಅವಳನ್ನು ಇಂದು ಸಾಗರದ ಸ್ವಿಮ್ಮಿಂಗ್ ನಲ್ಲಿ ಗಿನ್ನಿಸ್ ದಾಖಲೆಯಾಗಿಸಿತ್ತು.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ