ಭಾನುವಾರ, ಜೂನ್ 21, 2026

ಅವಳ ಪ್ರಪಂಚ (ಬೆಳಕಿಂಡಿಯ ಕತೆಗಳು - 39)


 "ಇತ್ತೀಚೆಗೆ ನಿನ್ನ ಪ್ರಪಂಚವೇ ಬದಲಾಗಿದೆ. ಮಗಳೇ ನಿನ್ನ ಪ್ರಪಂಚವಾಗಿರುವ ಹಾಗಿದೆ" ಕಿಚಾಯಿಸುವ ಧ್ವನಿಯಲ್ಲಿ ಅವರೆಂದರು. 

"ನಿದ್ದೆಗಣ್ಣಿನಲ್ಲಿಯೂ ತಡಕುತ್ತಾ, ನಾನಿರದಿದ್ದರೆ ಹುಡುಕುವ, ಹಿಂದೆ ಹಿಂದೆಯೇ ಬರುವ, ಕಣ್ಣಿನಿಂದ ಮರೆಯಾದರೆ ಅಳುವ ಪುಟ್ಟ ಮಗಳಿಗೆ ನಾನೇ ಪ್ರಪಂಚವಾಗಿರುವಾಗ.. ಅವಳಿಗೆ ಪ್ರಪಂಚದ ಅರಿವನ್ನು ಮೂಡಿಸುವ ಜವಾಬ್ದಾರಿ ಇರುವಾಗ ಸದ್ಯಕ್ಕೆ ಅವಳೇ ನನ್ನ ಪ್ರಪಂಚ. ನನ್ನ ಪುಟ್ಟ ಪ್ರಪಂಚದಲ್ಲಿ ಸದ್ಯಕ್ಕೆ ಕಳೆದು ಹೋಗಿದ್ದೇನೆ" ಎಂದಳು. 


ಈಗವರು ಅಂತಹ ಪುಟ್ಟ ಪ್ರಪಂಚದಲ್ಲಿ ಕಳೆದು ಹೋಗಿದ್ದ ತಮ್ಮ ದಿನಗಳನ್ನು ಹುಡುಕುತ್ತಿದ್ದಾರೆ.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ