ಭಾನುವಾರ, ಜೂನ್ 7, 2026

ಅಭಯ (ಬೆಳಕಿಂಡಿಯ ಕತೆಗಳು - 31)

ಎಷ್ಟು ಕರೆ ಮಾಡಿದರೂ ತಲುಪದ ಕರೆ, ಜೊತೆಗೆ ಮಗನಿದ್ದ ಪ್ರದೇಶದಲ್ಲಿ ಯುದ್ಧದ ತೀವ್ರತೆ ಕಂಡು ಅವಳಿಗೆ ಭಯವಾಗುತ್ತಿದ್ದುದರ ಜೊತೆಗೆ.. ತನ್ನ ಗಂಡ ತನ್ನಿಂದ ಏನೋ ಮುಚ್ಚಿಡುತ್ತಿದ್ದಾರೆ ಎಂಬ ಗುಮಾನಿಯೂ ಸೇರಿ ಅವಳನ್ನು ತೀವ್ರ ಆತಂಕಕ್ಕೆ ತಳ್ಳಿತ್ತು. ದೇವರ ಮನೆಯಲ್ಲಿ ಕುಳಿತವಳಿಗೆ ಅಭಯ ಸಿಕ್ಕಂತಾಗಿ ಎದ್ದು ಹೊರಬಂದರೆ ಮಗ ಅಮ್ಮನಿಗೆ ಸರ್ಪ್ರೈಸ್ ಕೊಡಲು ತಂದೆಯ ಜೊತೆ ಪ್ಲಾನ್ ಮಾಡಿ ಹೊರಟು ಬಂದಿದ್ದ. ಅದಾದ ನಂತರ ಅಲ್ಲಿ ಯುದ್ಧ ಶುರುವಾಗಿತ್ತು. ಅಂತೂ ಅಮ್ಮನ ಆತಂಕ ಕಳೆದು, ನೆಮ್ಮದಿ ಮೂಡಿತ್ತು.

~ವಿಭಾ ವಿಶ್ವನಾಥ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ