ಭಾನುವಾರ, ಜೂನ್ 21, 2026

ಐಶ್ವರ್ಯವಂತ (ಬೆಳಕಿಂಡಿಯ ಕತೆಗಳು - 37)


 "ನೀವು ಇಷ್ಟು ಐಶ್ವರ್ಯವಂತರಾಗಿದ್ದರೂ ನಿಮ್ಮ ಮಗನನ್ನು ಐಷಾರಾಮಿಯಾಗಿ ಬೆಳೆಯಲು ಬಿಡದೆ, ಮಿತಿಯಲ್ಲಿ ಕಟ್ಟುನಿಟ್ಟಾಗಿ ಬೆಳೆಸುತ್ತಿರುವುದಕ್ಕೆ ಎಲ್ಲರೂ ನಿಮ್ಮನ್ನು ಜಿಪುಣ ಎನ್ನುತ್ತಿದ್ದಾರೆ ಸರ್" ಎಂದು ಹೇಳಿದ ತನ್ನ ಸೆಕ್ರೆಟರಿಗೆ 

"ಹಣ, ಐಶ್ವರ್ಯ ಇಂದು ಬಂದು ನಾಳೆ ಹೋಗಬಹುದು. ಪ್ರಾಮಾಣಿಕತೆ, ನಿಷ್ಠೆ, ಬುದ್ಧಿವಂತಿಕೆ ಮಾತ್ರ ಅದನ್ನು ಉಳಿಸಿಕೊಳ್ಳುವಂತೆ ಮಾಡುತ್ತದೆ ಎನ್ನುವ ಅರಿವು ಅವನಿಗಾಗಬೇಕು. ಹಣದ ಅಹಂ ಇರದೆ ಎಲ್ಲರಲ್ಲೂ ಬೆಳೆಯುವ ಸರಳತನ, ಹೊಂದಾಣಿಕೆಯ ಮನೋಭಾವ ಬಂದರೆ ಆತ ಮುಂದೆ ತನ್ನ ಕೆಲಸಗಾರರ ಕಷ್ಟಗಳನ್ನು ಅರಿತು  ಮಾನವೀಯತೆಯಿಂದ ಸ್ಪಂದಿಸುತ್ತಾನೆ. ಆತ ಹಣದಿಂದಲ್ಲ.. ಗುಣದಿಂದ ಸಿರಿವಂತನಾಗಬೇಕು" ಎಂದ ತನ್ನ ಬಾಸ್ ನ ದೂರಾಲೋಚನೆಗೆ ತಲೆಬಾಗಿದ್ದಾನೆ ಅವನು.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ