ಕಡಲ ತೀರದಲ್ಲಿ ಬಂದು ಅವಳೊಡನೆ ಕುಳಿತಾಗಲೆಲ್ಲಾ ಅವಳು, ಹೇಳದ ದುಃಖಕ್ಕೆ ಕಡಲು ಸಾಂತ್ವನ ನೀಡುತ್ತದೆಂದು ಹೇಳುತ್ತಿದ್ದಳು. ನನಗೆ ಕಡಲು ಆಗೆಲ್ಲಾ ಗೋಳಾಡುವಂತೆ ಭಾಸವಾಗುತ್ತಿತ್ತು. ಅವಳ ಸಖ್ಯ, ಸಾಂಗತ್ಯದೆದುರು ಉಳಿದೆಲ್ಲವೂ ಸಪ್ಪೆಯಾಗಿತ್ತು.
ಈಗ ಅವಳಿಲ್ಲ. ಅವಳಿಲ್ಲದ ಖಾಲಿತನಕ್ಕೆ ಕಡಲಿನದ್ದೇ ಸಾಂತ್ವನ. ಗಾಳಿಯ ಮೊರೆತದಲ್ಲಿ ಅವಳ ದನಿ, ಕಾಲಿಗೆ ಮುತ್ತಿಕ್ಕುವ ಅಲೆಗಳಲ್ಲಿ ಅವಳದ್ದೇ ಸ್ಪರ್ಶದ ಛಾಯೆ. ಸಾಂತ್ವನಿಸುವ ಕಡಲಿಗೆ ನಾವು ಕಿವಿಯಾಗಬೇಕಿದೆ ಅಷ್ಟೇ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ