ಭಾನುವಾರ, ಜೂನ್ 14, 2026

ಸಂಗಮ (ಬೆಳಕಿಂಡಿಯ ಕತೆಗಳು - 36)


ಅಜ್ಜಿಯ ಹಳೆಯ ಅಚ್ಚ ಬಿಳುಪಿನ ರೇಷ್ಮೆ ಸೀರೆಯನ್ನು ಕೊಟ್ಟು ಹೊಸತು ತರುತ್ತೇನೆ ಎಂದು ಹೊರಟ ಅಮ್ಮನನ್ನು ತಡೆದು.. ಆ ಖಾಲಿ ಒಡಲಿನ ರೇಷ್ಮೆ ಸೀರೆಗೆ ಹೊಂದುವಂತೆ ನವಿಲನ್ನು ಅಚ್ಚು ಹಾಕಿಸಿ ತಂದು ಅಮ್ಮನ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಳು ಮಗಳು. ಅಮ್ಮನೇ ಅಪ್ಪಿದಂತಿದ್ದ ಆ ಪುಳಕವನ್ನು ಅನುಭವಿಸಿದವರಿಗೆ ಅದು ಅಂದಿನ ಬೆಸ್ಟ್ ಗಿಫ್ಟ್ ಆಗಿತ್ತು


ಸಂಪ್ರದಾಯ, ಅಕ್ಕರೆ ಜೊತೆಗೆ ಹೊಸತನದ ಸಂಗಮ ಎಲ್ಲರ ಮನಸೆಳೆದಿತ್ತು.

~ವಿಭಾ ವಿಶ್ವನಾಥ್ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ