ಭಾನುವಾರ, ಏಪ್ರಿಲ್ 26, 2026

ಮಂಗಳ ದೀಪ


ಹಚ್ಚಿರುವ ಪುಟ್ಟ ದೀಪ

ಬೆಳಕ ಚೆಲ್ಲುವ ರೂಪ


ಶ್ರದ್ಧೆಯ ಎಣ್ಣೆ ಎರೆದು

ಭಕ್ತಿಯ ಬತ್ತಿ ಎಳೆದು 

ಶಕ್ತಿಯ ಜ್ಯೋತಿ ಹೊತ್ತಿಸೆ 

ಪಸರಿಸಿದೆ ಆಶಾಕಿರಣ


ಗೊತ್ತಿಲ್ಲದವರಿಗೆ ಮುಂದಿನ

ದಾರಿ ತೋರುವ ದಿವ್ಯತೆಯಲಿ

ಗೊತ್ತಿರುವವರಿಗೆ ದಾರಿಯ

ಸ್ಪಷ್ಟವಾಗಿಸುವ ಭವ್ಯತೆಯಲಿ


ಪ್ರತಿಕ್ಷಣವೂ ಶುಭವಾಗಿ

ಪ್ರತಿದಿನವೂ ಹಬ್ಬವಾಗಿ

ಬಾಳೆಲ್ಲಾ ದೇದೀಪ್ಯಮಾನದಿ 

ಮಂಗಳಮಯವಾಗಿ ಸಾಗಲಿ


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ