ಭಾನುವಾರ, ಏಪ್ರಿಲ್ 26, 2026

ಪ್ರಕೃತಿಯ ದೈವತ್ವ


ಇದು ಪ್ರಕೃತಿಯ ಕೊಡುಗೆಗೆ 

ದೈವದ ಲೀಲೆಯೇ ಸರಿ


ಇಬ್ಬನಿಯಲಿ ತೊಳೆದ ಮುತ್ತುಗಳು

ಪರಿಮಳವನ್ನೆಲ್ಲಾ ಪಸರಿಸಿ..

ಬೆಳ್ಳಂಬೆಳಗು ಮನವ ತಂಪಾಗಿಸಿ


ಆಕರ್ಷಕ ರೂಪದಿಂದ ಸೆಳೆದು

ನವಿರಾದ ದಳಗಳ ಮೃದು ಸ್ಪರ್ಶದಿ

ಚಿತ್ತಕ್ಕೂ ಹರುಷ ನೀಡಿವೆ


ನೆಮ್ಮದಿಯ ಭಾವ ನಿಲುಕಿಸಲು 

ದೇವರಿಗೆ ಭಕ್ತಿಯನರ್ಪಿಸಲು

ದಾರದೊಂದಿಗೆ ಜೊತೆಯಾಗಿವೆ


ಕಟ್ಟಿರುವ ದಾರ ಬಂಧನವಲ್ಲವೆಂದು

ಹೂವಿನೊಡಗಿನ ಬಿಗಿಯಪ್ಪುಗೆಯಲ್ಲಿ

ಪ್ರೇಮ ಪಾಠವನೂ ಹೇಳಿವೆ 


ಪ್ರೀತಿಯ ನಂಟು ಬೆಸೆದು

ಹೂಮಾಲೆಯ ರೂಪದಿ 

ಸತಿ-ಪತಿಯಂತೆ ಆದರ್ಶವಾಗಿವೆ


ಪ್ರಕೃತಿಯ ಕೊಡುಗೆಗೆ

ಮಾನವನ ಕೈಚಳಕ ಸೇರಿ

ಒಂದಾಗುವುದು ದೈವದ ಲೀಲೆಯೇ..!


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ