ಸೋಮವಾರ, ಏಪ್ರಿಲ್ 6, 2026

ನನ್ನ ಗೋಪಾಲ (ಪುಸ್ತಕ ಯಾನ - 33)


ಪುಸ್ತಕದ ಹೆಸರು : ನನ್ನ ಗೋಪಾಲ

ಲೇಖಕರು : ಕುವೆಂಪು

ಪ್ರಕಾಶಕರು : ಉದಯರವಿ ಪ್ರಕಾಶನ

ಮೊದಲ ಮುದ್ರಣ : 1930

ಎಂಟನೇ ಮುದ್ರಣ (ನನ್ನ ಓದಿಗೆ ಸಿಕ್ಕಿದ್ದು) : 2015

ಪುಟಗಳು : 33

ಬೆಲೆ : 35 ರೂಪಾಯಿಗಳು


'ಮಲೆಗಳಲ್ಲಿ ಮದುಮಗಳು' ಹಾಗೂ 'ಕಾನೂರು ಹೆಗ್ಗಡತಿ'ಯಂತಹಾ ಮಹಾನ್ ಕಾದಂಬರಿಗಳನ್ನು ಬರೆದ , 'ಶ್ರೀ ರಾಮಾಯಣ ದರ್ಶನಂ' ಎಂಬ ಜ್ಞಾನಪೀಠ ಪುರಸ್ಕೃತ ಗ್ರಂಥ ಬರೆದ ಕುವೆಂಪುರವರ ಕೃತಿಗಳನ್ನು ಓದಿದ ಮೇಲೆ ಮಕ್ಕಳ ನಾಟಕವನ್ನು ಓದಿದರೆ ಆಯಾ ವಯೋಮಾನದವರಿಗೆ ಅರ್ಥವಾಗುವಂತಿರುವ ಈ ಪುಸ್ತಕದ ಜೊತೆಗೆ ಕುವೆಂಪುರವರ ಬರಹದ ಶೈಲಿಯೂ ಒಂದು ಬೆರಗಿನಂತೆ ಉಳಿದು ಬಿಡುತ್ತದೆ. 


ಮಕ್ಕಳೇ ರಂಗ ಪ್ರಯೋಗ ಮಾಡಲು ಅನುವಾಗುವಂತೆ.. ದೊಡ್ಡವರಿಗೂ ಓದಿನ ಹಾಗೂ ನಾಟಕದ ಹಾಗೂ ಶಿಶು ಸಾಹಿತ್ಯದ ಕುರಿತ ಆಸಕ್ತಿ ಮೂಡಿಸುವಂತಿದೆ. ಚಿಕ್ಕ ಪುಸ್ತಕವಾದರೂ ಸೊಗಸಾದ ಛಾಪು ಮೂಡಿಸುವಂತಿದೆ. ಮಕ್ಕಳು ಮುಗ್ಧತೆಯ ಪ್ರತಿರೂಪ. ನಂಬಿಕೆಗೆ ಒಲಿಯದ ದೇವರಿರುವನೇ ಎಂಬಂತೆ ಗೋಪಾಲ ಹಾಗೂ ಬನದ ಗೋಪಾಲನ ಚಿತ್ರಣವಿದೆ. 


ಮುಗ್ಧ ಭಕ್ತಿಯ ಜೊತೆಗೆ, ಭಗವದ್ಗೀತೆಯ ಶ್ಲೋಕಗಳೂ ಸೇರಿ ಭಕ್ತಿ- ಭಾವವನ್ನೂ ತುಂಬಿವೆ. ಅತಿರೇಖದ ಚಿತ್ರಣಗಳಿಲ್ಲದೇ ಸಹಜ ಸುಂದರವೆಂಬಂತೆ ಮೂಡಿ ಬಂದಿರುವ 'ನನ್ನ ಗೋಪಾಲ' ನಾಟಕವನ್ನು ಒಮ್ಮೆ ಶಾಲಾ ಮಕ್ಕಳ ಅಭಿನಯದಲ್ಲಿ ನೋಡಿದ್ದೆ. ಅದಕ್ಕೂ ಮೀರಿದ ಭಾವ ಈ ಅಕ್ಷರಗಳ ಚಿತ್ರಣದಲ್ಲಿ ದೊರೆಯಿತು.


ಓದಿರದಿದ್ದಲ್ಲಿ ಓದಿ ಎಂದಷ್ಟೇ ಹೇಳಬಲ್ಲೆ. ಕುವೆಂಪುರವರ ಪುಸ್ತಕ ವಿಮರ್ಶಿಸುವಷ್ಟು ದೊಡ್ಡವಳಲ್ಲ.. ಅವರ ಜನ್ಮ ದಿನದಂದು ಓದಿದ ಪುಸ್ತಕದ ಪುಟ್ಟ ಮಾಹಿತಿಯಷ್ಟೇ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ