ಅವಳು ಈಗ ಒಂಟಿಯಲ್ಲ
ಹಾಗೆಂದು, ಜಂಟಿಯೇ..?? ತಿಳಿದಿಲ್ಲ
ಅವಳ ತಲೆಯಲ್ಲಿ ನೂರಾರು ಆಲೋಚನೆಗಳು
ಅವಳ ಕೈಯ್ಯಲ್ಲಿ ನೂರಾರು ಕೆಲಸಗಳು
ಅವಳ ಕಣ್ಣಲ್ಲಿ ನೂರಾರು ಕನಸುಗಳು
ಅವಳ ತಲೆಯಲ್ಲಿ ಆಲೋಚನೆಗಳ ಶಕ್ತಿಯಿದೆ
ಅವಳ ಮನಸ್ಸಲ್ಲಿ ಬೆಂಬಲದ ಊಟೆಯಿದೆ
ಅವಳ ಹೃದಯದಲ್ಲಿ ಪ್ರಬಲವಾದ ಮಿಡಿತವಿದೆ
ಅವಳಿಗಾಗಿ ವಿಸ್ತಾರವಾದ ಅನಂತ ಆಗಸವಿದೆ
ಅವಳಿಗಾಗಿಯೇ ಎಂಬಂತೆ ತಂಗಾಳಿ ಬೀಸುತ್ತಿದೆ
ಅವಳ ಬರುವಿಕೆಗೆ ಕಡಲು ಕಾಯುತ್ತಲಿದೆ
ಅವಳಿಗೆ ಬೆಳಿಗ್ಗೆ ಸೂರ್ಯ ಜೊತೆಯಾದರೆ
ಅವಳು ರಾತ್ರಿಯ ಚುಕ್ಕಿಗಳನ್ನೆಣಿಸಲು ಕಾದಿರುತ್ತಾಳೆ
ಅವಳ ಕನಸಲ್ಲಿ ಚಂದ್ರಮನ ಲಗ್ಗೆ
ಅವಳ ಜಗತ್ತು ಅವಳು ವಿಸ್ತರಿಸಿಕೊಂಡಷ್ಟು
ಅವಳ ಆಸೆಗಳು ಅವಳಿಷ್ಟಪಟ್ಟಷ್ಟು
ಅವಳ ಬಂಧಗಳು ಭಾವಿಸಿಕೊಂಡಷ್ಟು
ಅವಳು ಒಂಟಿಯಲ್ಲ.. ಒಂಟಿ ಹೇಗಾದಾಳು
ಅವಳಿಗೆ ಅವಳೇ ನೂರಾನೆ ಬಲದಂತೆ
ಅವಳಿಗೆ ಅವಳಿರುವಾಗ ಒಂಟಿ ಹೇಗಾದಾಳು..?
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ